
ನಿಮ್ಮ ಹಸ್ತದಲ್ಲಿ ಈ ಎಲ್ಲಾ ಗುರುತುಗಳಿದ್ದರೆ ನೀವು ಶ್ರೀಮಂತರಾಗುವುದು ಖಂಡಿತ...
Sunday, March 6, 2022
ಶಂಖ
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ಶಂಖದ ಗುರುತು ತುಂಬಾ ಮಂಗಳಕರವಾಗಿದೆ. ಅಂಗೈಯಲ್ಲಿ ಶಂಖಡ ಗುರುತನ್ನು ಹೊಂದಿರುವ ಜನರು ಬಹಳ ಶ್ರೀಮಂತರಾಗಿರುತ್ತಾರೆ. ಅಲ್ಲದೆ ಇವರು ಕಡಿಮೆ ಪ್ರಯತ್ನದ ಮೂಲಕ ಹೆಚ್ಚು ಯಶಸ್ಸನ್ನು ಪಡೆಯುತ್ತಾರೆ.
ಸ್ವಸ್ತಿಕ
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ಸ್ವಸ್ತಿಕದ ಗುರುತು ಇದ್ದರೆ ಅದು ತುಂಬಾ ಮಂಗಳಕರವಾಗಿರುತ್ತದೆ. ಅಂತಹ ಜನರು ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ. ಅವರು ತಮ್ಮ ಸ್ವಂತ ಪರಿಶ್ರಮದಿಂದ ಹೆಚ್ಚಿನ ಎತ್ತರಕ್ಕೆ ಬೆಳೆಯುತ್ತಾರೆ. ಇದಲ್ಲದೇ ಇವರ ಜೀವನದಲ್ಲಿ ಹಣಕ್ಕೆ ಯಾವ ರೀತಿಯ ಕೊರತೆಯೂ ಇರುವುದಿಲ್ಲ.
ಕಮಲ
ಅಂಗೈಯಲ್ಲಿರುವ ಕಮಲದ ಚಿಹ್ನೆಯನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೈಯಲ್ಲಿ ಕಮಲದ ಚಿಹ್ನೆಯನ್ನು ಹೊಂದಿರುವವರು ಯಾವಾಗಲೂ ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. ಇವರ ಜೀವನದಲ್ಲೂ ಹಣಕ್ಕೆ ಸಮಸ್ಯೆ ಇರುವುದಿಲ್ಲ.
ಚಕ್ರ
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ಚಕ್ರದ ಗುರುತು ಇರುವುದು ಮಂಗಳಕರವಾಗಿರುತ್ತದೆ. ತಮ್ಮ ಅಂಗೈಯಲ್ಲಿ ಚಕ್ರದ ಗುರುತು ಹೊಂದಿರುವ ಜನರು ಶ್ರೀಮಂತರಾಗಿರುತ್ತಾರೆ.