-->
War Effect: ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಸಾಧ್ಯತೆ

War Effect: ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಸಾಧ್ಯತೆ

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪರಿಣಾಮ ವಿಶ್ವದಾದ್ಯಂತ ಉಂಟಾಗಿದೆ. ಈ ಪರಿಣಾಮ ಭಾರತದಲ್ಲೂ  ಬೀರಿದ್ದು, ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 130 ಡಾಲರ್‌ ಗೆ ತಲುಪಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾಗುವ ಸಾಧ್ಯತೆಯಿದೆ.
 ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಕೊನೆ ಹಂತದ ಮತದಾನ ಇಂದು ಮುಗಿದ ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹೆಚ್ಚಳವು ಲೀಟರ್‌ಗೆ 12 ರಿಂದ 22 ರೂ. ಆಗಲಿದ್ದು, ಶ್ರೀಸಾಮಾನ್ಯರ ಜೇಬಿಗೆ ದೊಡ್ಡ ಹೊರೆಯಾಗಲಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಶೀಘ್ರದಲ್ಲೇ ಪ್ರಸ್ತುತ ಬೆಲೆಗಳನ್ನು ಪರಿಷ್ಕರಿಸಲಿವೆ ಎಂದು ಹೇಳಲಾಗುತ್ತಿದೆ. 

ತೈಲ ಬೆಲೆ ಏರಿಕೆಯಾಗುತ್ತಿದ್ದಂತೆ ಸರಕು ಸಾಗಣೆ ದರವೂ ಏರಿಕೆಯಾಗಲಿದ್ದು, ಅಗತ್ಯ ವಸ್ತುಗಳ ಬೆಲೆ ಮೇಲೆ ಪರಿಣಾಮ ಬೀರುತ್ತದೆ.

Ads on article

Advertise in articles 1

advertising articles 2

Advertise under the article