16 Gold Medal ಪಡೆದ ವಿದ್ಯಾರ್ಥಿನಿಯನ್ನೇ ಟ್ರೋಲ್ ಮಾಡಿದ ನೆಟ್ಟಿಗರು
ರಾಯಚೂರು: 16 ಚಿನ್ನದ ಪದಕ ಪಡೆದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ (Visvesvaraya Technological University) ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಯುವತಿಯೋರ್ವಳು ಇದೀಗ ಟ್ರೋಲ್‌ಗೆ ಒಳಗಾಗಿದ್ದಾಳೆ.
ವಿಟಿಯು ಇತಿಹಾಸದಲ್ಲಿ ಹೊಸ ಸಾಧನೆ ಮಾಡಿದ ಯುವತಿ ಬುಶ್ರಾ ಮತೀನ್. ಆಕೆ ಧರಿಸಿರುವ ಹಿಜಾಬ್ ಮುಂದಿಟ್ಟು ಅವಳನ್ನು ಅನೇಕರು ಟ್ರೋಲ್ ಮಾಡಿದ್ದಾರೆ.
ಸಾಧನೆಗೈದು ನೆಗೆಟಿವ್ ಟ್ರೋಲ್‌ಗೆ ಒಳಗಾಗುತ್ತಿರುವ ವಿದ್ಯಾರ್ಥಿನಿ ಬುಶ್ರಾ ಮತೀನ್ ರಾಯಚೂರು ನಗರದ ನಿವಾಸಿ. ಈಕೆ ಜಹೀರುದ್ದಿನ್ ಎಂಬುವವರ ಪುತ್ರಿ. ವಿದ್ಯಾರ್ಥಿನಿ ರಾಯಚೂರು ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದಾರೆ. ಸಿವಿಲ್ ಇಂಜಿನಿಯರಿಂಗ್ನ ಎಲ್ಲಾ 8 ಸೆಮಿಸ್ಟರ್‌ನಲ್ಲೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಜೊತೆಗೆ ವಿವಿಧ ವಿಷಯಗಳಲ್ಲೂ ವಿನೂತನ ಸಾಧನೆ ಮಾಡಿ ಒಟ್ಟು 16 ಗೋಲ್ಡ್ ಮೆಡಲ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾಳೆ.