ಸೋಮೇಶ್ವರ ಬೀಚಿನಲ್ಲಿ ಈಜಾಡುವ ವೇಳೆ ಸಮುದ್ರದಲ್ಲಿ ಮುಳುಗಿ 23 ವರ್ಷದ ಯುವಕ ಸಾವು
Monday, March 7, 2022
ಸಮುದ್ರದಲ್ಲಿ ಮುಳುಗಿ ಯುವಕನೊಬ್ಬ ಸಾವನ್ಪದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ಸೋಮೇಶ್ವರ ಬೀಚ್ ನಲ್ಲಿ ನಡೆದಿದೆ.
ಬವಳಾಡಿಯ ಶಶಿಧರ್ ದೇವಾಡಿಗ ( 23 ) ಮ್ರತಪಟ್ಟ ಯುವಕ. ಶಶಿಧರ್ ದೇವಾಡಿಗ ನಾಲ್ವರು ಸ್ನೇಹಿತರ ಜೊತೆಗೆ ಬೈಂದೂರಿನ ಸೋಮೇಶ್ವರ ಬೀಚ್‌ಗೆ ಈಜಲು ತೆರಳಿದ್ದು, ಸಮುದ್ರದಲ್ಲಿ ಈಜಾಡುತ್ತಾ ಆಳಕ್ಕೆ ತೆರಳಿದ್ದಾರೆ.
ಈ ವೇಳೆ ಅಲೆಯ ರಭಸಕ್ಕೆ ಸಿಲುಕಿ ಅಪಾಯಕ್ಕೆ ಸಿಲುಕಿದರು. ಕೂಡಲೇ ಸ್ಥಳೀಯರು ನಾಲ್ವರನ್ನು ರಕ್ಷಿಸಿದ್ದು, ಶಶಿಧರ್ ಮುಳುಗಿ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ವ್ರತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಬೈಂದೂರು ಠಾಣೆಯಲ್ಲಿ ದಾಖಲಾಗಿದೆ..