ಬುದ್ಧಿವಂತಿಕೆಯಲ್ಲಿ ಎಲ್ಲರಿಗಿಂತ ಒಂದು ಕೈ ಮೇಲು ಈ ರಾಶಿಯವರು...!!
Monday, March 7, 2022
ಕನ್ಯಾ ರಾಶಿ
ಕನ್ಯಾ ರಾಶಿಯವರು ಬಹಳ ಬುದ್ಧಿವಂತರಾಗಿರುತ್ತಾರೆ ಹಾಗೂ ಅವರು ಅವರನ್ನು ಬುದ್ಧಿವಂತರು ಎಂದು ಜನರ ಎದುರು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಇದು ಸತ್ಯ ಕೂಡ ಹೌದು. ಅವರು ಬಹಳ ಬುದ್ಧಿವಂತರಾಗಿರುತ್ತಾರೆ ಜೊತೆಗೆ, ತಮ್ಮ ಸುತ್ತಮುತ್ತಲಿನ ಜನರಿಗೆ ಸಂಬಂಧ ಹಾಗೂ ಗೆಳೆತನದ ಕುರಿತಾಗಿ ಹಲವಾರು ಉಪಯುಕ್ತ ಮಾರ್ಗದರ್ಶನವನ್ನು ಕೂಡ ನೀಡುತ್ತಾರೆ. ಯಾವುದೇ ಒಂದು ವಿಷಯವನ್ನು ಕೂಲಂಕುಷವಾಗಿ ಯೋಚಿಸಿ, ವಿಷ್ಲೇಶಿಸಿ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.
ತುಲಾ ರಾಶಿ
ಇವರು ಹೊರಗಿನ ಜನರಿಗೆ ಮೊಂಡುತನ ಹೊಂದಿರುವವರನ್ನು ಕಾಣುತ್ತಾರೆ. ಯಾವುದೇ ವಿಷಯವನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ಅದಕ್ಕೆ ಕಾರಣವೆಂದರೆ ಅವರು ಪ್ರತಿಯೊಂದು ವಿಷಯದ ಬಗ್ಗೆಯೂ ಸೂಕ್ಷ್ಮವಾಗಿ ಯೋಚಿಸಿ ಅದರ ಆಗುಹೋಗುಗಳ ಕುರಿತು ಕುಲಂಕುಶವಾಗಿ ತಿಳಿದುಕೊಂಡ ಬಳಿಕವೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಕಟಕ ರಾಶಿ
ಕಟಕ ರಾಶಿಯವರು ಕೂಡ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಆದರೆ, ಇವರು ತಮ್ಮ ಬುದ್ಧಿವಂತಿಕೆ ಹಾಗೂ ಜ್ಞಾನವನ್ನು ಇತರರ ಮುಂದೆ ಪ್ರದರ್ಶಿಸಲು ಇಷ್ಟ ಪಡುವುದಿಲ್ಲ. ಇದರಿಂದಾಗಿ ಜನರು ಇವರ ಬುದ್ಧಿವಂತಿಕೆಯ ಬಗ್ಗೆ ಅನುಮಾನ ಇಟ್ಟುಕೊಂಡಿರಬಹುದು. ಆದರೆ, ಯಾವುದೇ ವಿಷಯವನ್ನು ಕೂಡ ಸರಿಯಾಗಿ ಯೋಚನೆ ಮಾಡದೆ, ವಿಶ್ಲೇಷಣೆ ಮಾಡದೆ ಇವರು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ.
ಕುಂಭ ರಾಶಿ
ಕುಂಭ ರಾಶಿಯ ಜನರು ಬುದ್ಧಿವಂತರಾಗಿರುತ್ತಾರೆ ಇದಕ್ಕೆ ಸಾಕ್ಷಿಯೆಂದರೆ ಅವರು ತಮ್ಮ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿ ಹೊಂದಿರುತ್ತಾರೆ. ಇದರ ಯೋಜನೆ ಹಾಗೂ ಆಲೋಚನೆಗಳು ವಯಸ್ಸನ್ನು ಮೀರಿದಷ್ಟು ಇರುತ್ತದೆ. ಪ್ರತಿಯೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಹಲವಾರು ದೃಷ್ಟಿಕೋನಗಳಿಂದ ಯೋಚಿಸುತ್ತಾರೆ ಹಾಗೂ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.