-->

ಉಡುಪಿ ಬ್ರಹ್ಮಾವರದಲ್ಲಿ ಬ್ರಹ್ಮಮಂಡಲ ಸೇವೆ- VIDEO ನೋಡಿ

ಉಡುಪಿ ಬ್ರಹ್ಮಾವರದಲ್ಲಿ ಬ್ರಹ್ಮಮಂಡಲ ಸೇವೆ- VIDEO ನೋಡಿ


ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಉಂಗ್ರಪಳ್ಳಿ ಗರಡಿ ಮನೆ ಮಟಪಾಡಿ ಬ್ರಹ್ಮಾವರ ಇದರ 40 ನೇ ವರ್ಷದ ವಾರ್ಷಿಕ ಉತ್ಸವ ಮತ್ತು 15 ನೇ ವರ್ಷದ ಪುನರ್‌ ಪ್ರತಿಷ್ಠೆಯ ವರ್ಧಂತ್ಯುತ್ಸವ ಪ್ರಯುಕ್ತ ಶ್ರೀ ದೇವಿಯ ಬ್ರಹ್ಮ ಕಲಶಾಭಿಷೇಕಚಂಡಿಕಾ  ಹಾಗೂ ಬ್ರಹ್ಮಮಂಡಲ(ಡಕ್ಕೆ ಬಲಿ)ಸೇವೆಯು ನಡೆಯಿತು.

 ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದುರ್ಗಾ ಮಹಿಳಾ ಮಂಡಳಿ ಮಟಪಾಡಿ ಇವರಿಂದ ಲಲಿತಾ ಸಹಸ್ರನಾಮ ಸ್ತ್ರೋತ್ರ ಪಠಣ ಹಾಗೂ ಶ್ರೀ ರಾಮಚಂದ್ರ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನೆ ಜರುಗಿತು. 

ಧಾರ್ಮಿಕ ಕಾರ್ಯಕ್ರಮದ ಪ್ರಮುಖ ಅಂಗವಾಗಿ ನಾಗಬ್ರಹ್ಮ ಸ್ಥಾನದಲ್ಲಿ ಹಾಲಿಟ್ಟು ಸೇವೆ, ದೇವಿಯ ಸನ್ನಿಧಾನದಲ್ಲಿ ಬ್ರಹ್ಮಮಂಡಲ ಡಕ್ಕೆ ಬಲಿಯ ಸೇವೆಯು ಸಂಪನ್ನಗೊಂಡಿತು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಕ್ಷೇತ್ರ ನೀಲಾವರ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.













Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99