
ಯೂ ಟರ್ನ್ ತೆಗೆದುಕೊಂಡ ಕಾರು ಚಾಲಕನ ನಿಯಂತ್ರಣ ತಪ್ಪಿ ಕಟ್ಟಡಕ್ಕೆ ಢಿಕ್ಕಿ: ವೀಡಿಯೋ ವೈರಲ್
ಮಂಗಳೂರು: ಯೂ ಟರ್ನ್ ತೆಗೆದುಕೊಂಡ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಫುಟ್ ಪಾತ್ ಗೆ ಇಳಿದು ಕಟ್ಟಡವೊಂದಕ್ಕೆ ಢಿಕ್ಕಿ ಹೊಡೆದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಪಘಾತದ ವೀಡಿಯೋ ವೈರಲ್ ಆಗಿದ್ದು, ಘಟನೆಯಲ್ಲಿ ವ್ಯಕ್ತಿಯೋರ್ವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಮಂಗಳೂರು ನಗರದ ಕೊಡಿಯಾಲ್ ಬೈಲ್ ನಲ್ಲಿ ಬುಧವಾರ ಈ ಘಟನೆ ನಡೆದಿದೆ. ಇದೀಗ ಈ ಅಪಘಾತದ ವೀಡಿಯೋ ವೈರಲ್ ಆಗುತ್ತಿದೆ. ರಥಬೀದಿ ಕಡೆಯಿಂದ ಬಂದ ಕಾರೊಂದು ಕೊಡಿಯಾಲ್ ಬೈಲ್ ಕರ್ನಾಟಕ ಬ್ಯಾಂಕ್ ಇರುವ ರಸ್ತೆಗೆ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತಗೊಂಡಿದೆ.
ರಥಬೀದಿಯಿಂದ ಕೊಡಿಯಾಲ್ ಬೈಲ್ ಗೆ ಬರುವಾಗ ಸ್ವಲ್ಪ ಎತ್ತರದಲ್ಲಿರುವ ರಸ್ತೆಗೆ ಸಂಪರ್ಕಗೊಂಡ ಕಾರು ಏಕಮುಖ ಸಂಚಾರವುಳ್ಳ ರಸ್ತೆಯಲ್ಲಿ ಮುಂದೆ ಸಾಗುತ್ತಿತ್ತು. ಈ ಸಂದರ್ಭ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಫುಟ್ ಪಾತ್ ಗೆ ಇಳಿದು ಕಟ್ಟಡವೊಂದಕ್ಕೆ ಢಿಕ್ಕಿ ಹೊಡೆದಿದೆ. ಈ ಸಂದರ್ಭ ಅದೇ ಸ್ಥಳದಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಬರುತ್ತಿದ್ದು, ಅವರು ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.