Gujarath ಸರಕಾರದ ವಿರುದ್ಧ ಸುಪ್ರೀಂಕೋರ್ಟ್ ಮೊರೆಹೋದ ಮಹಾತ್ಮಗಾಂಧಿ ಮರಿ ಮೊಮ್ಮಗ: ಕಾರಣವೇನು ಗೊತ್ತಾ
Friday, March 25, 2022
ನವದೆಹಲಿ : ಗುಜರಾತ್ ರಾಜ್ಯ ಸರ್ಕಾರ ಸಬರಮತಿ ಆಶ್ರಮದ ಪುನಾರಾಭಿವೃದ್ದಿಗೆ ನಿರ್ಧರಿಸಿರುವ ಕ್ರಮದ ವಿರುದ್ಧ ಮಹಾತ್ಮಗಾಂಧಿ ಮರಿ ಮೊಮ್ಮಗ ತುಷಾರ್ ಅರುಣ್ ಗಾಂಧಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಆಶ್ರಮದ ಪುನರಾಭಿವೃದ್ದಿಗೆ ಅನುಮತಿ ನೀಡದಂತೆ ಅವರು ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ತುಷಾರ್ ಅರುಣ್ ಗಾಂಧಿ ಪರ ವಕೀಲೆ ಇಂದಿರಾ ಜೈಸಿಂಗ್ ತ್ರಿಸದಸ್ಯ ಪೀಠದ ಮುಂದೆ ಈ ವಿಚಾರ ಪ್ರಸ್ತಾಪಿಸಿ, ತುರ್ತು ವರ್ಚುವಲ್ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ. ಈ ಮನವಿ ವಿಚಾರಣೆಗೆ ಪೀಠ ಒಪ್ಪಿಗೆ ಸೂಚಿಸಿದೆ.
ಸಬರಮತಿ ಆಶ್ರಮ ಒಂದು ಎಕರೆ ವಿಸ್ತೀರ್ಣದಲ್ಲಿದ್ದು, ಇದರ ಸುತ್ತಲಿನ ಭೂಮಿಯನ್ನು ಅಭಿವೃದ್ಧಿ ಪಡಿಸಲು ಗುಜರಾತ್ ಸರ್ಕಾರ ನಿರ್ಧರಿಸಿತ್ತು. ಇದನ್ನು ಅಭಿವೃದ್ಧಿಪಡಿಸುವ ಮೂಲಕ ಗಾಂಧಿ ಬದುಕು, ತತ್ವಗಳು ಮತ್ತು ಜೀವನದ ಧೈಯವನ್ನು ಹರಡುವ ಯೋಜನೆ ಇದಾಗಿದೆ ಎಂದು ಸರ್ಕಾರ ಹೇಳಿಕೊಂಡಿತ್ತು
ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗಾಂಧಿ ಮೊಮ್ಮಗ ತುಷಾರ್ ಅರುಣ್ ಗಾಂಧಿ, ಸರ್ಕಾರಕ್ಕೆ ಪುನರಾಭಿವೃದ್ಧಿಗೆ ಅವಕಾಶ ನೀಡಿದರೆ ಮೂಲ ಪರಿಕಲ್ಪನೆಗೆ ದಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.