-->

U.P election: ತಾನು ಸೂಚಿಸಿದ ವ್ಯಕ್ತಿಗೆ ಮತ ಹಾಕದ ಪತ್ನಿಯನ್ನು ಈತ ಮಾಡಿದ್ದೇನು ಗೊತ್ತಾ?

U.P election: ತಾನು ಸೂಚಿಸಿದ ವ್ಯಕ್ತಿಗೆ ಮತ ಹಾಕದ ಪತ್ನಿಯನ್ನು ಈತ ಮಾಡಿದ್ದೇನು ಗೊತ್ತಾ?

ಬರೇಲಿ: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಾನು ಸೂಚಿಸಿದ ವ್ಯಕ್ತಿಗೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ಪತ್ನಿಯನ್ನೇ ಮನೆಯಿಂದ ಹೊರ ಹಾಕಿರುವ ಘಟನೆ ನಡೆದಿದೆ.
ಈ ವಿಚಾರವಾಗಿ ಗಂಡ ತನ್ನ ಹೆಂಡತಿಯನ್ನು ಥಳಿಸಿ ಮನೆಯಿಂದ ಹೊರಹಾಕಿದ್ದಾನೆ. ಅಲ್ಲದೇ ಪತ್ನಿಗೆ ವಿಚ್ಛೇದನ ನೀಡುವ ಬೆದರಿಕೆಯನ್ನು ಒಡ್ಡಿದ್ದ. ಪತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಪೊಲೀಸರನ್ನು ಒತ್ತಾಯಿಸಿದೆ.

ಗೊತ್ತಾದದ್ದು ಹೇಗೆ: ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶದ ದಿನ ಪತ್ನಿ ಮತ ನೀಡಿದ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಇದರಿಂದಾಗಿ ಪತ್ನಿ ಸಂತಸಪಟ್ಟು ಸಂಭ್ರಮಿಸಿದ್ದರು. ಇದು ಪತಿಯ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ತಾನು ಸೂಚಿಸಿದ ವ್ಯಕ್ತಿಗೆ ಪತ್ನಿ ಓಟು ಹಾಕಿಲ್ಲ ಎಂಬುದು ಆತನಿಗೆ ದೃಢವಾಗಿದ್ದು, ಈ ಕಾರಣಕ್ಕೆ ಪತ್ನಿಯನ್ನು ಥಳಿಸಿ ಮನೆಯಿಂದ ಹೊರ ಹಾಕಿದ್ದಾನೆ.Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99