
Udupi- ಕೋಳಿ ಕುರಿ ವ್ಯಾಪಾರದಲ್ಲಿ ಹಿಂದೂ ಸಂಘಟನೆ ಯುವಕರು
Wednesday, March 23, 2022
ಜಾತ್ರೆಗಳಲ್ಲಿ ವ್ಯಾಪಾರ ಅಂದ್ರೆ ಅಲ್ಲಿ ಸಾಮಾನ್ಯವಾಗಿ ಮುಸ್ಲಿಮ್ ವ್ಯಾಪಾರಿ ಗಳು ಹೆಚ್ಚಾಗಿ ಇರ್ತಾರೆ. ಅದರಲ್ಲೂ ಕರಾವಳಿಯ ಜಾತ್ರೆ ವ್ಯಾಪಾರ, ಕೋಳಿ ಕುರಿ ಆಡು ವ್ಯಾಪಾರದಲ್ಲಿ ಮುಸ್ಲಿಮರೇ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ.
ಆದರೆ ಇತ್ತೀಚಿನ ದಿನಗಳಿಂದ ಮುಸ್ಲಿಮರಿಗೆ ಜಾತ್ರೆಗಳಲ್ಲಿ ವ್ಯಾಪಾರ ನಿರ್ಬಂಧ ಹಾಕಿದ್ದು. ಮುಸ್ಲಿಂ ವ್ಯಾಪಾರಿಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಹಿಂದೂ ಸಂಘಟನೆ ಯುವಕರು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾಪು ಮಾರಿಗುಡಿಯ ಸುಗ್ಗಿ ಮಾರಿ ಪೂಜೆಯಲ್ಲಿ ಕೋಳಿ ಕುರಿ ಆಡು ವ್ಯಾಪಾರದಲ್ಲಿ ಕೋಟ್ಯಾಂತರ ರೂಪಾಯಿಗಳ ವ್ಯವಹಾರ ನಡೆಯುತ್ತೆ. ಸದ್ಯ ಈ ರೀತಿಯಲ್ಲಿ ಹಿಂದೂ ಯುವಕರೇ ತೊಡಗಿಸಿಕೊಂಡಿದ್ದಾರೆ.
ಹಾಸನ, ಶಿವಮೊಗ್ಗ ಗದಗ ಭಾಗದಿಂದ ಕೋಳಿ ಕುರಿ ತರಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಹಿಂದೆ ಕಾಪು ಮಾರಿ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರು ಏಲಂನಲ್ಲಿ ಪಾಲ್ಗೊಂಡು ಹೆಚ್ಚಿನ ಹಣ ಕೊಟ್ಟು ಜಾಗ ಪಡೆದುಕೊಳ್ಳುತ್ತಿದ್ದರು. ಆದರೆ ಈ ಬಾರಿ ನಮಗೆ ಕಡಿಮೆ ಹಣದಲ್ಲಿ ವ್ಯಾಪಾರಕ್ಕೆ ಅವಕಾಶ ಸಿಕ್ಕಿದೆ ಅಂತ ವ್ಯಾಪಾರದಲ್ಲಿ ತೊಡಗಿಸಿಕೊಂಡ ಹಿಂದೂ ಸಂಘಟನೆಯ ರಂಜಿತ್ ಹೇಳಿದ್ದಾರೆ..