
ಅತೀ ಹೆಚ್ಚು ಚಿನ್ನ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ - India ಎಷ್ಟನೇ ಸ್ಥಾನದಲ್ಲಿ ಇದೆ ಗೊತ್ತಾ?
ಅತೀ ಹೆಚ್ಚು ಚಿನ್ನ ಹೊಂದಿರುವ 10 ದೇಶಗಳ ಪಟ್ಟಿಯಲ್ಲಿ ಭಾರತವೂ ಇದ್ದು, ಭಾರತ 9ನೇ ಸ್ಥಾನದಲ್ಲಿ ಇದೆ.
ಈ ಪಟ್ಟಿಯಲ್ಲಿ ಅಮೇರಿಕಾ ಮೊದಲ ಸ್ಥಾನದಲ್ಲಿ ಇದೆ. ಅಮೆರಿಕದ ಬಳಿ 8,133.47 ಟನ್ ಚಿನ್ನವಿದೆ. ಅತಿ ಹೆಚ್ಚು ಚಿನ್ನ ಹೊಂದಿರೋ ದೇಶಗಳ ಪೈಕಿ ದ್ವಿತೀಯ ಸ್ಥಾನದಲ್ಲಿರುವ ಜರ್ಮನಿಯಲ್ಲಿ 3,359.09 ಟನ್ ಬಂಗಾರವಿದೆ. ಇಟಲಿಯಲ್ಲಿ 2451.84 ಟನ್ ಬಂಗಾರವಿದ್ದು, ತೃತೀಯ ಸ್ಥಾನದಲ್ಲಿದೆ. 2436.35 ಟನ್ ಚಿನ್ನವನ್ನು ಹೊಂದಿರುವ ಫ್ರಾನ್ಸ್ 4ನೇ ಸ್ಥಾನ ಪಡೆದುಕೊಂಡಿದೆ. ರಷ್ಯಾ ದೇಶದ ಬಳಿ 2298.53 ಟನ್ ನಷ್ಟು ಚಿನ್ನವಿದೆ.
ರಷ್ಯಾ ಈ ಪಟ್ಟಿಯಲ್ಲಿ 5ನೇ ಸ್ಥಾನ ಗಿಟ್ಟಿಸಿಕೊಂಡಿದೆ. 1948.31 ಟನ್ ಬಂಗಾರದ ನಿಕ್ಷೇಪ ಹೊಂದಿರೋ ಚೀನಾ 6ನೇ ಸ್ಥಾನ ಸ್ಥಾನದಲ್ಲಿ ಇದೆ. 1040 ಟನ್ ಚಿನ್ನವನ್ನು ಸಂಪಾದಿಸಿಕೊಂಡಿರುವ ಸ್ವಿಜರ್ಲ್ಯಾಂಡ್ 7ನೇ ಸ್ಥಾನದಲ್ಲಿದೆ. 845.97 ಟನ್ ಚಿನ್ನ ಹೊಂದಿರೋ ಜಪಾನ್ 8ನೇ ಸ್ಥಾನ ಪಡೆದರೆ, ಭಾರತದಲ್ಲಿ 743.83 ಟನ್ ಚಿನ್ನವಿದ್ದು 9ನೇ ಸ್ಥಾನ ತನ್ನದಾಗಿಸಿದೆ. 612.45 ಟನ್ ಚಿನ್ನವನ್ನು ಹೊಂದಿರುವ ನೆದರ್ಲೆಂಡ್ ಟಾಪ್ ಟೆನ್ ನಲ್ಲಿ ಕೊನೇಯ ಸ್ಥಾನದಲ್ಲಿ ಇದೆ.