ಜಾತ್ರೆಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ನಿರ್ಬಂಧ ವಿಧಿಸಿದ್ದೇ ಕಾಂಗ್ರೆಸ್: 'ಇಲ್ಲಿದೆ rules ನೋಡಿ'
Wednesday, March 23, 2022
ಬೆಂಗಳೂರು: ಹಿಂದೂ ಧಾರ್ಮಿಕ ಉತ್ಸವ ಗಳಲ್ಲಿ ಹಿಂದೂ ಯೇತರರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂಬ ವಿಚಾರದ ಬಗ್ಗೆ ಸದನದಲ್ಲೂ ತೀವ್ರ ಸ್ವರೂಪದ ಚರ್ಚೆ ನಡೆದಿದೆ.
ಈ ವಿಚಾರವಾಗಿ ಸದನದಲ್ಲಿ ತೀವ್ರ ವಾಕ್ಸಮರ ನಡೆದಿದ್ದು, ಕಾಂಗ್ರೆಸ್ ಮುಖಂಡರು, ಇದರ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ಗರಂ ಆಗಿದ್ದಾರೆ. ಮಾಜಿ ಸಚಿವ ಯುಟಿ ಖಾದರ್ , ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ಕೆಲ ಧರ್ಮದವರಿಂದ ಬ್ಯಾನರ್ ಹಾಕಲಾಗಿದೆ. ಬ್ಯಾನರ್ ಹಾಕಿದವರು ಹೇಡಿಗಳು ಮತ್ತು ಕ್ರೂರಿಗಳು ಎಂದರು. ಇದು ಆಡಳಿತ ಪಕ್ಷ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದ್ದು, ಎರಡೂ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಯಿತು.
ಈ ವಿಚಾರವಾಗಿ ಮಾತನಾಡಿದ, ಕಾನೂನು ಸಚಿವ ಮಾಧುಸ್ವಾಮಿ ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸಿದ್ದಾರೆ. ಅದೇನೆಂದರೆ 2002ರ ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯನ್ನು ಉಲ್ಲೇಖಿಸಿದ ಸಚಿವರು, ಇಲ್ಲಿ ನೋಡಿ. ಇದೇನು ಬಿಜೆಪಿ ಮಾಡಿದ ಕಾಯ್ದೆ- ಕಾನೂನು ಅಲ್ಲ. ನಿಮ್ಮದೇ ಕಾಂಗ್ರೆಸ್ನವರು ಮಾಡಿದ್ದು. ಧಾರ್ಮಿಕ ಸಂಸ್ಥೆಗಳ ಸಮೀಪದ ಕಟ್ಟಡ, ಜಮೀನು, ನಿವೇಶನಗಳನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡುವಂತಿಲ್ಲ ಎಂದು ಈ ಕಾಯ್ದೆಯಲ್ಲಿ ಹೇಳಿದೆ. ಬೇರೆ ಧರ್ಮದವರಿಗೆ ಅವಕಾಶ ಇಲ್ಲ ಎಂದೂ ಇದೇ ಕಾಯ್ದೆಯಲ್ಲಿ ಸ್ಪಷ್ಟವಾಗಿದೆ. ದೇವಸ್ಥಾನದ ಆವರಣ ಬಿಟ್ಟು ಹೊರಗಡೆ ಆದರೆ ಅದನ್ನು ಸರಿಪಡಿಸಬಹುದು ಅಷ್ಟೆ ಎಂದರು.