
ಶನಿದೇವರ ಕೃಪೆಯಿಂದಾಗಿ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ...!!
Wednesday, March 23, 2022
ಮಕರ : ಮಕರ ರಾಶಿಯವರಿಗೆ ಶನಿ ದೇವನು ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಏಕೆಂದರೆ ಲಗ್ನ ಮತ್ತು ಧನೇಶನ ಉಪಸ್ಥಿತಿಯಿಂದಾಗಿ, ಈ ರಾಶಿಯವರು ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಾರೆ. ಇಲ್ಲಿ ಎರಡನೇಯ ಮನೆಯಲ್ಲಿ ಗೋಚರಿಸಲಿದ್ದಾನೆ. ಈ ಪರಿಸ್ಥಿತಿಯಲ್ಲಿ, ಶನಿದೇವನು ತನ್ನ ಸಂಪೂರ್ಣಫಲವನ್ನು ನೀಡುತ್ತಾನೆ. ಎರಡನೇ ಮನೆಯು ಕುಟುಂಬದ ಮನೆಯಾಗಿರುತ್ತದೆ. ಶನಿದೇವನು ತನ್ನ ಪ್ರಭಾವದಿಂದ ಕುಟುಂಬದಲ್ಲಿ ಶುಭ ಕಾರ್ಯಗಳನ್ನು ಹೆಚ್ಚಿಸಲಿದ್ದಾನೆ. ಕುಟುಂಬದಲ್ಲಿ ಧನಾತ್ಮಕ ಪರಿಣಾಮಗಳನ್ನು ಬೀರಲಿದ್ದಾನೆ.
ನಾಲ್ಕನೇ ಮನೆಯ ಮೇಲೆ ಶನಿಯ ದೃಷ್ಟಿ ಕ್ಷೀಣಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಗೃಹ ಸಮಸ್ಯೆಗಳು ಹೆಚ್ಚಾಗಬಹುದು. ಮನೆಯಿಂದ ದೂರವಿರುವ ಸಂದರ್ಭ ಎದುರಾಗಬಹುದು. ಭೂಮಿ, ಆಸ್ತಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಅಡಚಣೆಯಾಗಬಹುದು. ಶನಿಯ ಮುಂದಿನ ದೃಷ್ಟಿ ಎಂಟನೇ ಮನೆಯ ಮೇಲೆ ಇರುತ್ತದೆ. ಇದರ ಪರಿಣಾಮವಾಗಿ ಹೊಟ್ಟೆ ಮತ್ತು ಕಾಲಿನ ತೊಂದರೆಗಳು ತಲೆದೋರಬಹುದು. ಆಂತರಿಕ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳು ಕಾಲಕಾಲಕ್ಕೆ ಕಾಣಿಸಿಕೊಳ್ಳಬಹುದು.