ಈ ಸುಂದರಿ ಮದುವೆಯಾಗಿದ್ದು, ಒಂದಲ್ಲ, ಎರಡಲ್ಲ, ಮೂರು; ಆದರೂ ಆಸೆ ಮುಗಿದಿಲ್ಲ
Wednesday, March 23, 2022
ಮೈಸೂರು: ಮೊದಲ ಮದುವೆಯನ್ನು ಮುಚ್ಚಿಟ್ಟು ಬರೋಬ್ಬರಿ ಮೂರು ಮದುವೆಯಾದ ಸುಂದರಿ ಕೊನೆಗೂ ತನ್ನ ಬಾಯ್‌ಫ್ರೆಂಡ್ ಜೊತೆ ತನ್ನ ಮೂರನೇ ಗಂಡನ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಉದಯಗಿರಿಯ ನಿಧಾಖಾನ್ ಈಗಾಗಲೇ 2 ಮದುವೆ ಆಗಿದ್ದು, ಒಂದನೇ ಮದುವೆ ವಿಚಾರ ಮುಚ್ಚಿಟ್ಟು ಆಪ್ ಮೂಲಕ ಪರಿಚಯವಾದ ರಾಜೀವ್ ನಗರದ ಅಜಾಮ್ ಖಾನ್ನನ್ನು 2019ರಲ್ಲಿ ಮದುವೆಯಾಗಿದ್ದಳು.
ಆದರೆ ನಿಧಾಖಾನ್‌ಗೆ ಮತ್ತೊಬ್ಬನ ಜೊತೆ ಖುಲ್ಲಂ ಖುಲ್ಲಂ ಇತ್ತಂತೆ.
ಅಜಾಮ್ ಖಾನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ತ ಮೈಸೂರಿನಲ್ಲೇ ಇದ್ದ ನಿಧಾಖಾನ್, ಬೇರೆಬೇರೆ ಯುವಕರ ಜತೆ ಚಾಟಿಂಗ್, ಮೀಟಿಂಗ್ನಲ್ಲೇ ತೊಡಗಿದ್ದಳು. ಮೂರು ಮದ್ವೆಯಾಗಿದ್ದರೂ ಈಕೆಗೆ ಮತ್ತೊಬ್ಬ ಪ್ರಿಯಕರ ಇದ್ದನ. ಆತನ ಜತೆ ಈಕೆ ಇರುವಾಗಲೇ ಎಂಟ್ರಿಕೊಟ್ಟ 3ನೇ ಗಂಡ ಅಜಾಮ್ ಖಾನ್, ಪತ್ನಿ-ಪ್ರಿಯಕರನನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಪತ್ನಿಯ ನಡೆಯನ್ನ ಪ್ರಶ್ನಿಸಿದ ಗಂಡನಿಗೆ ಈಕೆ ಜೀವ ಬೆದರಿಕೆಯನ್ನೂ ಹಾಕಿದ್ದಾಳಂತೆ.