
sensodyne toothpaste ಕಂಪೆನಿಗೆ ಭಾರೀ ದಂಡ: ಯಾಕೆ ಗೊತ್ತಾ?
ನವದೆಹಲಿ: ಜಾಹೀರಾತಿನಲ್ಲಿ ತಪ್ಪು ಮಾಹಿತಿ ನೀಡಿದ್ದಕ್ಕಾಗಿ 'ಸೆನ್ಸೋಡೈನ್' ಟೂತ್‌ಪೇಸ್ಟ್‌ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಸಿಸಿಪಿಎ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಸೆನ್ಸೋಡೈನ್ ಕಂಪನಿಯು ಗ್ರಾಹಕರಿಗೆ ದಾರಿತಪ್ಪಿಸುವ ಜಾಹೀರಾತುಗಳನ್ನು ತೋರಿಸಿದೆ ಎಂದು ಹೇಳಿದೆ.
ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (CCPA) 10 ಲಕ್ಷ ದಂಡವನ್ನು ವಿಧಿಸುವುದರ ಜೊತೆಗೆ, ಸೆನ್ಸೋಡೈನ್ ತನ್ನ ಎಲ್ಲಾ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಟಿವಿ, OTT, ಯೂಟ್ಯೂಬ್, ಸಾಮಾಜಿಕ ಮಾಧ್ಯಮಗಳಿಂದ ಏಳು ದಿನಗಳಲ್ಲಿ ತೆಗೆದುಹಾಕುವಂತೆ ನಿರ್ದೇಶಿಸಿದೆ. ಮಂಗಳವಾರದ ಅಧಿಕೃತ ಬಿಡುಗಡೆಯು ಸೆನ್ಸೋಡೈನ್‌ನ ಜಾಹೀರಾತುಗಳನ್ನು 'ಜಗತ್ತಿನಾದ್ಯಂತ ದಂತವೈದ್ಯರು ಶಿಫಾರಸು ಮಾಡುವಂತೆ' ಮತ್ತು 'ವಿಶ್ವದ ನಂಬರ್ ಒನ್ ಸೆನ್ಸಿಟಿವಿಟಿ ಟೂತ್‌ಪೇಸ್ಟ್' ಅನ್ನು ಏಳು ದಿನಗಳಲ್ಲಿ ತೆಗೆದುಹಾಕುವಂತೆ ಕೇಳಿದೆ.