Lover ಜೊತೆ ಸೆ*ಕ್ಸ್ ಮಾಡುವಾಗ ವೀಡಿಯೋ ಮಾಡಿದ; ಬಳಿಕ ತನ್ನ ಗೆಳೆಯರಿಗೆ ತೋರಿಸಿದ - ನಂತರ ಆಕೆಯನ್ನು ಅತ್ಯಾಚಾರ ಮಾಡಿದ್ದು ಬರೋಬ್ಬರಿ 8 ಮಂದಿ
Wednesday, March 23, 2022
ಚೆನ್ನೈ: ಯುವತಿಯೋರ್ವಳ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ ಅದನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿ ಪದೇ ಪದೇ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಾಲಾ ವಿದ್ಯಾರ್ಥಿಗಳು ಸೇರಿದಂತೆ 8 ಮಂದಿಯನ್ನು ಬಂಧಿಸಲಾಗಿದೆ.
22 ವರ್ಷದ ಯುವತಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಕಳೆದ ಏಳು ತಿಂಗಳಿನಿಂದ ಬೆದರಿಕೆ ಹಾಕಿ ಮೂವರು ಶಾಲಾ ಬಾಲಕರ ಸಹಿತ ಹಲವರು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ಆರೋಪಿಗಳ ಪೈಕಿ ಒಬ್ಬಾತನೊಂದಿಗೆ ಮಹಿಳೆಗೆ ಪ್ರೇಮ ಸಂಬಂಧವಿತ್ತು. ಇದೇ ಸ್ನೇಹದಿಂದ ಆತ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ. ಆದರೆ ಅದನ್ನು ವಿಡಿಯೋ ಮಾಡಿಕೊಂಡು ಬಳಿಕ ತನ್ನ ಗೆಳೆಯರಿಗೆ ತೋರಿಸಿದ್ದ. ಅದೇ ವಿಡಿಯೋ ತೋರಿಸಿ ಮಹಿಳೆಗೆ ಬೆದರಿಕೆ ಹಾಕಿದ ಕಾಮುಕರು ಬಳಿಕ ಪದೇ ಪದೇ ಆಕೆಯ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ