Pathaan-Deepika Padukone: ಎಲ್ಲರ ಮುಂದೆ ಶಾರುಖ್ ಗೆ ಕಿಸ್ ಕೊಟ್ಟ ದೀಪಿಕಾ ಟ್ರೋಲ್
Wednesday, February 1, 2023
ಪಠಾಣ್ ಚಿತ್ರದಲ್ಲಿ ಯಶಸ್ಸಿನ ಬಳಿಕ ನಡೆದ ಕಾರ್ಯಕ್ರಮದಲ್ಲಿ ದೀಪಿಕಾ ಎಲ್ಲರ ಮುಂದೆಯೇ ಶಾರುಖ್ ಅವರನ್ನು ಚುಂಬಿಸಿದರು.
ಶಾರುಖ್ ಖಾನ್ ಬಾಲಿವುಡ್ ನಲ್ಲಿ ಹಲವು ದಿನಗಳಿಂದ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. 5 ವರ್ಷಗಳ ಅಂತರದ ನಂತರ ಪಠಾಣ್ ಹೆಸರಿನಲ್ಲಿ ತೆರೆಕಂಡ ಕಿಂಗ್ ಖಾನ್ ಅವರ ಸಿನಿಮಾ ವಿಮರ್ಶಕರನ್ನು ಮೆಚ್ಚಿಸಿದೆ. ರಿಲೀಸ್ ಆಗಿ ಮೊದಲ ವಾರವಾದರೂ ಕಲೆಕ್ಷನ್ ಆರಂಭದಂತೆಯೆ ಇದೆ.
ಈ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಮತ್ತೊಬ್ಬ ನಟ ಜಾನ್ ಅಬ್ರಾಮ್ ಸಹನಟನಾಗಿ ನಟಿಸಿದ್ದಾರೆ. ಶಾರುಖ್, ದೀಪಿಕಾ ಮತ್ತು ಜಾನ್ ಅಬ್ರಹಾಂ ಚಿತ್ರದ ಯಶಸ್ಸಿನ ಸಂತಸದಲ್ಲಿದ್ದಾರೆ.
ಇತ್ತೀಚೆಗೆ ಚಿತ್ರದ ಸಕ್ಸಸ್ ಮೀಟ್ ನಡೆದಾಗ ದೀಪಿಕಾ ಪಡುಕೋಣೆ ಅಲ್ಲಿಗೆ ಬಂದು ಶಾರುಖ್ ಖಾನ್ ಗೆ ಕಿಸ್ ಮಾಡಿದ್ದಾರೆ. ಆದರೆ ಇದೇ ವೇದಿಕೆಯಲ್ಲಿ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಜಾನ್ ಅಬ್ರಹಾಂ ಅವರಿಗೆ ಕಿಸ್ ಮಾಡಿದ್ದಾರೆ.
ಶಾರುಖ್ ಅಬ್ರಹಾಂಗೆ ಕಿಸ್ ಮಾಡುವುದಕ್ಕಿಂತ, ಶಾರುಖ್ ಗೆ ದೀಪಿಕಾ ಕಿಸ್ ಮಾಡಿದ್ದು ಈಗ ವೈರಲ್ ಆಗುತ್ತಿದೆ. ಶಾರುಖ್ ಗೆ ಮುತ್ತು ಕೊಟ್ಟರೆ ಬಾಯ್ ಫ್ರೆಂಡ್ ರಣವೀರ್ ಸಿಂಗ್ ಗೆ ಹೊಟ್ಟೆಕಿಚ್ಚು ಬರುತ್ತದೆ ಎಂದು ದೀಪಿಕಾ ಅವರನ್ನು ಸಿನಿಮಾಪ್ರಿಯರು ಟ್ರೋಲ್ ಮಾಡುತ್ತಿದ್ದಾರೆ.
ಬೇಷರಂ ರಂಗ್ ಹಾಡಿನಲ್ಲಿ ಇಬ್ಬರು ಬೋಲ್ಡ್ ರೊಮ್ಯಾನ್ಸ್ ಮಾಡಿರುವುದರಿಂದ ಹಾಡನ್ನು ತೆಗೆದುಹಾಕುವಂತೆ ಬೇಡಿಕೆಗಳು ಬಂದಿದ್ದವು. ಈ ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿಯಲ್ಲಿ ಕಾಣಿಸಿಕೊಂಡದ್ದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಪಠಾಣ್ ಬಿಡುಗಡೆಯಾದ ನಂತರ ವಿವಾದ ತಣ್ಣಗಾಗಿದೆ.
ಚಿತ್ರದ ಯಶಸ್ಸು ಶಾರುಖ್ ಖಾನ್‌ಗೆ ಹೊಸ ಚೈತನ್ಯವನ್ನು ಮೂಡಿಸಿದೆ. ಈ ಚಿತ್ರಕ್ಕಾಗಿ ಅವರು 100 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಲಾಭದಲ್ಲಿ ಕೂಡಾ ಪಾಲು ಇದೆ ಎಂಬ ಮಾತು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ.
ಚಿತ್ರದ ಯಶಸ್ಸು ಶಾರುಖ್ ಖಾನ್‌ಗೆ ಹೊಸ ಚೈತನ್ಯವನ್ನು ತುಂಬಿದೆ. ಈ ಚಿತ್ರಕ್ಕಾಗಿ ಅವರು 100 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಲಾಭದಲ್ಲಿ ಕೂಡಾ ಪಾಲು ಇದೆ ಎಂಬ ಮಾತು ಕೇಳಿ ಬರುತ್ತಿದೆ.
ಬಾಲಿವುಡ್ ತಾರೆಯರಲ್ಲೇ ಅತ್ಯಂತ ಶ್ರೀಮಂತರಾಗಿರುವ ಶಾರುಖ್ ಖಾನ್ ಕೇವಲ ಹಣದ ವಿಚಾರದಲ್ಲಿ ಮಾತ್ರವಲ್ಲದೆ ಸ್ಟಾರ್ ಇಮೇಜ್‌ನಲ್ಲೂ ಅಗ್ರಸ್ಥಾನಕ್ಕೆ ತಲುಪಿದ್ದಾರೆ ಎಂದು ಶಾರುಖ್ ಖಾನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾ ದಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.
.
ಸಿನಿಮಾದಲ್ಲಿ ದೀಪಿಕಾ ಅವರ ಫೈಟರ್ ಲುಕ್ ಎಲ್ಲರಿಗೂ ಮೆಚ್ಚುಗೆಯಾಗಿದೆ. ಅವರ ಆ್ಯಕ್ಷನ್ ಸೀನ್ಸ್ ಕೂಡ ಸಿನಿಪ್ರಿಯರ ಮನಸು ಗೆದ್ದಿದೆ.
ಶಾರುಖ್ ಹಾಗೂ ದೀಪಿಕಾ ಜೋಡಿ ಒಮ್ಮೆಯೂ ಸೋತಿಲ್ಲ. ಚೆನ್ನೈ ಎಕ್ಸ್ ಪ್ರೆಸ್, ಓಂ ಶಾಂತಿ ಓಂ ಕೂಡಾ ಬಾಲಿವುಡ್ ನೆನಪಿಸಿಕೊಳ್ಳುವ ಸಿನಿಮಾಗಳಾಗಿದೆ. ಈಗ ಪಠಾಣ್ ಕೂಡಾ ಆ ಸಾಲಿಗೆ ಸೇರಿದೆ.