-->

UDUPI-ಕಸಕ್ಕೆ ಬೆಂಕಿ ಹಾಕಿದ ಜಗಳ ;  ಮಗನಿಂದಲೆ ತಂದೆಯ ಕೊಲೆ

UDUPI-ಕಸಕ್ಕೆ ಬೆಂಕಿ ಹಾಕಿದ ಜಗಳ ; ಮಗನಿಂದಲೆ ತಂದೆಯ ಕೊಲೆ


ಮನೆಯ ಅಂಗಲದಲ್ಲಿ ಕಸಕ್ಕೆ ಬೆಂಕಿ ಹಾಕಿದ ವಿಚಾರವೊಂದಕ್ಕೆ ಸಂಬಂಧಿಸಿ ನಡೆದ ಜಗಳದಲ್ಲಿ ಮಗನೇ ತಂದೆಯನ್ನು ಕೊಡಲಿಯಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ದಾರುಣ ಘಟನೆ ಕೋಟೇಶ್ವರ ಸಮೀಪದ ಗೋಪಾಡಿಯಲ್ಲಿ ನಡೆದಿದೆ. 

ಗೋಪಾಡಿ ಗ್ರಾಮದ ಹಾಲಾಡಿ ಮನೆ ನಿವಾಸಿ ನರಸಿಂಹ ಮರಕಾಲ (74) ಮಗನಿಂದಲೇ ಕೊಲೆಯಾದ ದುರ್ದೈವಿ. 

ಆರೋಪಿ ಪುತ್ರ ರಾಘವೇಂದ್ರ ( 36) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ರಾಘವೇಂದ್ರ ತೋಳಾರ್ ಜಾಗದ ವಿಚಾರದಲ್ಲಿ‌ ತಂದೆಯೊಂದಿಗೆ ಜಗಳ ಮಾಡಿಕೊಂಡಿದ್ದು, ಕಳೆದ ಕೆಲ ವರ್ಷಗಳಿಂದ ಮನೆಯ ಒಂದು ಭಾಗದಲ್ಲಿ ಪ್ರತ್ಯೇಕವಾಗಿ ವಾಸವಿದ್ದನು. ಆರೋಪಿ ರಾಘವೇಂದ್ರ ಶನಿವಾರ ರಾತ್ರಿ ಮನೆಯ ಅಂಗಳದಲ್ಲಿ ಕಸಕಡ್ಡಿ ಸಂಗ್ರಹಿಸಿ ಅದಕ್ಕೆ ಬೆಂಕಿ ಹಾಕಿದ್ದಾನೆ. 

ಪಕ್ಕದಲ್ಲಿಯೇ ದನದ ಕೊಟ್ಟಿಗೆ, ಹುಲ್ಲು ರಾಶಿ ಇದ್ದ ಕಾರಣ ನರಸಿಂಹ ಮರಕಾಲ ಅವರು ಬೆಂಕಿಗೆ ನೀರು ಹಾಕಿ ಆರಿಸಲು ಹೋದ ವೇಳೆ ರಾಘವೇಂದ್ರ ಏಕಾಏಕಿ ತಂದೆ ಮೇಲೆ ಮುಗಿಬಿದ್ದು, ಮನೆಯ ಒಳಗಿದ್ದ ಕಬ್ಬಿಣದ ಕೊಡಲಿಯನ್ನು ತಂದು ನರಸಿಂಹ ಮರಕಾಲ ಅವರ ತಲೆಗೆ ಮುಖಕ್ಕೆ ಬಲವಾಗಿ ಕಡಿದಿದ್ದಾನೆ. ಅಲ್ಲೇ ಸ್ಥಳದಲ್ಲಿದ್ದ ನರಸಿಂಹ ಅವರ ಪುತ್ರಿ ತಪ್ಪಿಸಲು ಹೋದಾಗ ಅವರಿಗೂ ಕೊಡಲಿಯನ್ನು ಬೀಸಿ ಗಾಯಗೊಳಿಸಿದ್ದಾನೆ. 

ಹಲ್ಲೆಯಿಂದ ನರಸಿಂಹ ಅವರಿಗೆ ತೀವೃ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಕೂಡಲೇ ಕೋಟೇಶ್ವರದ ಆಸ್ಪತ್ರೆಯಗೆ ಸಾಗಿಸಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸಿದೆ ಕೊನೆಯುಸಿರೆಳೆದಿದ್ದಾರೆ. ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99