ಹೆಂಡತಿ ವಿರುದ್ಧ ದೂರು ನೀಡಿದಾತನನ್ನೇ ವಶಕ್ಕೆ ಪಡೆದ ಪೊಲೀಸರು: ಅಷ್ಟಕ್ಕೂ ಹೆಂಡತಿ ವಿರುದ್ಧ ನೀಡಿದ ದೂರು ಏನು ಗೊತ್ತಾ?
Sunday, March 20, 2022
ನಲ್ಗೊಂಡ: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ತನಗಾಗಿ ಹೆಂಡತಿ ಮಟನ್ ಕರಿ ಮಾಡಲಿಲ್ಲವೆಂದು 100 ಗೆ ಡಯಲ್ ಮಾಡಿ ಪತ್ನಿ ವಿರುದ್ಧ ದೂರು ನೀಡಿದ್ದು, ಇದೀಗ ದೂರು ನೀಡಿದಾತನನ್ನೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ನವೀನ್ ಎಂದು ತಿಳಿದುಬಂದಿದ್ದು,. ಈತ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ, ತನಗೆ ಮಟನ್ ಕರಿ ಬೇಯಿಸದ ಹೆಂಡತಿಯ ವಿರುದ್ಧ ದೂರು ನೀಡಿದ್ದಾನೆ.
ಮದ್ಯದ ಅಮಲಿನಲ್ಲಿದ್ದ ನವೀನ್ ನಿಯಂತ್ರಣ ಕೊಠಡಿಗೆ ಪದೇ ಪದೇ ಬಾರಿ ಕರೆ ಮಾಡಿದ್ದು, ಈ ವ್ಯಕ್ತಿಗೆ ತಕ್ಕ ಪಾಠ ಕಲಿಸಬೇಕು ಎಂದು ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ ಪೊಲೀಸರು ನವೀನ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆಯ(IPC) ಸೆಕ್ಷನ್ 290 ಮತ್ತು 510 ರ ಅಡಿಯಲ್ಲಿ ಕ್ರಮವಾಗಿ ಸಾರ್ವಜನಿಕ ಉಪದ್ರವ ಮತ್ತು ಸಾರ್ವಜನಿಕ ಸ್ಥಳದಲ್ಲಿ ಕುಡುಕ ವ್ಯಕ್ತಿಯಿಂದ ಅನುಚಿತವಾಗಿ ವರ್ತಿಸುವ ಆರೋಪಗಳಡಿ ಕೇಸ್ ದಾಖಲಿಸಿಕೊಂಡಿದ್ದಾರೆ.
ನವೀನ್, ರಾತ್ರಿ ಮದ್ಯ ಸೇವಿಸಿ ಕುರಿಮರಿಯೊಂದಿಗೆ ಮನೆಗೆ ಮರಳಿದ್ದ. ಅದನ್ನು ಕತ್ತರಿಸಿ ಬೇಯಿಸಲು ತನ್ನ ಹೆಂಡತಿಗೆ ಆದೇಶಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮನನೊಂದಿದ್ದ ಅವನ ಹೆಂಡತಿ ಅಡುಗೆ ಮಾಡಲು ನಿರಾಕರಿಸಿದ್ದಳು, ಬಳಿಕ ನವೀನ್ ಪೊಲೀಸರಿಗೆ ಕರೆ ಮಾಡಿ ಕಾಟ ಕೊಟ್ಟಿದ್ದಾನೆ. ಗಸ್ತು ಪೊಲೀಸರು ಅವರ ಮನೆಗೆ ಹೋದಾಗ ಆತ ಸಂಪೂರ್ಣವಾಗಿ ಮದ್ಯಪಾನ ಮಾಡಿರುವುದು ಕಂಡುಬಂದಿದೆ.