ಆ ವಿದೇಶಿ ಯುವತಿ ಬಂದಿದ್ದು body massage ಮಾಡಲು: ಆದರೆ ಈತ ಮಾಡಿದ್ದೇ ಬೇರೆ
Sunday, March 20, 2022
ಜೈಪುರ: ಆಯುರ್ವೇದ ಮಸಾಜ್‌ಗೆಂದೆ ಮಸಾಜರ್‌ನನ್ನು ನೆದರ್ಲ್ಯಾಂಡ್ಸ್ ಮೂಲದ ಯುವತಿ ತಾನು ತಂಗಿದ್ದ ಹೊಟೇಲ್‌ಗೆ ಕರೆಸಿದ್ದು, ಆತ ಮಸಾಜ್ ಮಾಡುವ ನೆಪದಲ್ಲಿ ಯುವತಿಯನ್ನು ಅತ್ಯಾಚಾರ ಮಾಡಿದ್ದಾನೆ.
ಅತ್ಯಾಚಾರ ಘಟನೆ ನಡೆದಿರುವುದು ರಾಜಸ್ಥಾನ ರಾಜಧಾನಿ ಜೈಪುರದಲ್ಲಿ. ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ನೆದರ್ಲ್ಯಾಂಡ್ ನಿವಾಸಿ. ಏಳು-ಎಂಟು ದಿನಗಳ ಹಿಂದೆಯಷ್ಟೇ ಜೈಪುರಕ್ಕೆ ಬಂದಿದ್ದ ಆಕೆ ಇಲ್ಲಿ ಸಿಂಧಿ ಕ್ಯಾಂಪ್ ಪ್ರದೇಶದ ಹೋಟೆಲ್‌ವೊಂದರಲ್ಲಿ ತಂಗಿದ್ದಳು.
ಸಂತ್ರಸ್ತೆ ವಿದೇಶಿ ಮಹಿಳೆ ಹೋಟೆಲ್ ಆಡಳಿತ ಮಂಡಳಿಗೆ ಆಯುರ್ವೇದಿಕ್ ಮಸಾಜ್ ಮಾಡುವಂತೆ ಕೇಳಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಸಿಬ್ಬಂದಿ ಖತೀಪುರದ ಮಸಾಜ್ ಕೆಲಸಗಾರ ಬಿಜು ಮುರಳೀಧರನ್‌ಗೆ ಕರೆ ಮಾಡಿದ್ದಾರೆ. ಮಸಾಜ್ ಮಾಡಲೆಂದು ಬಿಜು ಬಂದಾಗ ಹೊಟೇಲ್ ನಲ್ಲಿ ವಿದೇಶಿ ಮಹಿಳೆ ಒಬ್ಬಳೇ ಇದ್ದಳು.
ಅಲ್ಲಿ ಒಬ್ಬಂಟಿಯಾಗಿದ್ದ ವಿದೇಶಿ ಪ್ರವಾಸಿಯನ್ನು ಕಂಡು ಬಿಜು ಅತ್ಯಾಚಾರ ಎಸಗಿದ್ದಾನೆ. ಒಬ್ಬಳೇ ಇದ್ದುದರಿಂದ ಯಾವುದೋ ಅಹಿತಕರ ಘಟನೆಗೆ ಹೆದರಿ ಸುಮ್ಮನಾಗಿದ್ದಳು. ಬಳಿಕ ಬಿಜು ಕೂಡ ಕ್ಷಮೆ ಯಾಚಿಸಿ ಅಲ್ಲಿಂದ ಹೊರಟು ಹೋಗಿದ್ದಾನೆ. ಆದರೆ ಮರುದಿನ ಸಂತ್ರಸ್ತೆ ಪ್ರವಾಸಿ ಸಿಂಧಿ ಕ್ಯಾಂಪ್ ಪೊಲೀಸ್ ಠಾಣೆಗೆ ತಲುಪಿ ಅಲ್ಲಿ ತನ್ನ ಮೇಲಾದ ಕ್ರೌರ್ಯವನ್ನು ವಿವರಿಸಿದ್ದಾಳೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಪರಾರಿಯಾಗುವ ಮುನ್ನವೇ ಬಂಧಿಸಿದ್ದು, ತನಿಖೆ ಆರಂಭಿಸಿದ್ದಾರೆ.