ಲೈಂಗಿಕ ಆಸೆ ತೀರಿಸಲು ಹೋಗಿ ಮಹಿಳೆ ಎಡವಟ್ಟು: 'ಆ' ಭಾಗದಲ್ಲಿ ಪತ್ತೆಯಾಯಿತು ಗಾಜಿನ ಚೂರುಗಳು
Sunday, March 20, 2022
ನ್ಯೂಯಾರ್ಕ್: ಮೂತ್ರನಾಳದ ಸಮಸ್ಯೆಯಿಂದ ವೈದ್ಯರ ಬಳಿ ತೆರಳಿದ ಮಹಿಳೆಯ ಎಕ್ಸ್‌ರೇ ರಿಪೋರ್ಟ್ ನೋಡಿ ವೈದ್ಯರೇ ದಂಗಾಗಿದ್ದಾರೆ.
ಮೂತ್ರನಾಳದಲ್ಲಿ ನೋವು ಮತ್ತು ಸೋಂಕಿನ ಹಿನ್ನೆಲೆಯಲ್ಲಿ45 ವರ್ಷದ ಮಹಿಳೆ ಓರ್ವಳು ಕ್ಲಿನಿಕ್ ಗೆ ತೆರಳಿದ್ದಳು. ಮಹಿಳೆ ಆಸ್ಪತ್ರೆಗೆ ಹೋಗಿ ಮೂತ್ರಕೋಶ ಸ್ಕ್ಯಾನ್ ಮಾಡಿಸಿದ್ದಾಳೆ. ಸ್ಕ್ಯಾನ್‍ನಲ್ಲಿ ದೊಡ್ಡ ಕಲ್ಲು ಮತ್ತು ಗಾಜಿನ ತುಂಡೊಂದು ಕಂಡುಬಂದಿದೆ. ಪರೀಕ್ಷೆ ಮಾಡಿ ನೋಡಿದಾಗ 8 ಸೆ.ಮಿ ಉದ್ದದ ಕಲ್ಲು ಮತ್ತು ಗಾಜು ಪತ್ತೆಯಾಗಿದೆ.
ನಡೆದದ್ದೇನು?
ಮಹಿಳೆಯು ತನ್ನ ಲೈಂಗಿಕ ಆಸೆಯನ್ನು ಈಡೇರಿಸಿಕೊಳ್ಳಲು ನಾಲ್ಕು ವರ್ಷಗಳ ಹಿಂದೆ ಗಾಜಿನ ಬಾಟಲಿಯನ್ನು ತನ್ನ ಯೋನಿಯ ಬದಲಿಗೆ ಮೂತ್ರನಾಳಕ್ಕೆ ಸೇರಿಸಿದ್ದಳು. ಪರಿಣಾಮ ಗಾಜಿನ ತುಂಡು ದೇಹದ ಒಳಗೆ ಸೇರಿದೆ. ಮರ್ಯಾದೆಗೆ ಅಂಜಿ ಮಹಿಳೆ ಈ ವಿಷಯ ಯಾರಿಗೂ ತಿಳಿಸಿರಲಿಲ್ಲ.
ಇದು ಅತಿರೇಕಕ್ಕೆ ಹೋಗಿ ಮಹಿಳೆಗೆ ಮೂತ್ರನಾಳದ ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಆಕೆ ವೈದ್ಯರಿಗೆ ತೋರಿಸಿಕೊಳ್ಳಲೇ ಬೇಕಾಯಿತು. ವೈದ್ಯರಿಗೆ ತಿಳಿದ ಕೂಡಲೇ ಅವರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ, ಗಾಜು ಮತ್ತು ಕಲ್ಲನ್ನು ದೇಹದಿಂದ ಹೊರತೆಗೆಯಲಾಗಿದೆ.