UDUPI - ಮಗನಿಂದ ತಂದೆ ಕೊಲೆ ಪ್ರಕರಣ; ಆರೋಪಿ ಮಗನ ಬಂಧನ
Sunday, March 20, 2022
ಕೌಟುಂಬಿಕ ದ್ವೇಷದ ಕಾರಣಕ್ಕಾಗಿ ಮಗನಿಂದ ತಂದೆಯ ಕೊಲೆಗೆ ಸಂಬಂಧಿಸಿದಂತೆ ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ ( 36) ಬಂಧಿತ ಕೊಲೆ ಆರೋಪಿ.
ಮನೆಯ ಅಂಗಲದಲ್ಲಿ ಕಸಕ್ಕೆ ಬೆಂಕಿ ಹಾಕಿದ ವಿಚಾರವೊಂದಕ್ಕೆ ಸಂಬಂಧಿಸಿ ನಡೆದ ಜಗಳದಲ್ಲಿ ತಂದೆ ನರಸಿಂಹ ಮರಕಾಲ (74) ಅವರನ್ನು ಮಗ ರಾಘವೇಂದ್ರ ಕೊಡಲಿಯಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ದಾರುಣ ಘಟನೆ ಕೋಟೇಶ್ವರ ಸಮೀಪದ ಗೋಪಾಡಿಯಲ್ಲಿ ನಡೆದಿತ್ತು.
ತನಿಖೆ ಚುರುಕುಗೊಳಿಸಿದ ಕುಂದಾಪುರ ಪೊಲೀಸರು ಆರೋಪಿ ಮಗ ರಾಘವೇಂದ್ರನನ್ನು ಬಂಧಿಸಿದ್ದಾರೆ..