
ಮಾರಕ ಖಾಯಿಲೆ TB ಬಗ್ಗೆ ನೀವು ಈ ವಿಚಾರ ತಿಳಿದಿರಲೇ ಬೇಕು
Friday, March 25, 2022
ಬೆಂಗಳೂರು: ಮಾರ್ಚ್ 24 ವಿಶ್ವ ಕ್ಷಯರೋಗ ದಿನ. ಹೀಗಾಗಿ ಈ ರೋಗದ ಬಗ್ಗೆ ಕೆಲವೊಂದು ಮಾಹಿತಿಗಳು ನಿಮಗಾಗಿ.
ವಿಪರೀತ ಕೆಮ್ಮು, ಟಿಬಿ ಕಾಯಿಲೆಯ ಪ್ರಮುಖ ಲಕ್ಷಣ. ಇದು ಸಾಂಕ್ರಾಮಿಕ ಬ್ಯಾಕ್ಟೀರಿಯಾದ ಕಾಯಿಲೆಯಾಗಿದ್ದು, ನಿರ್ದಿಷ್ಟವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ನಿಮಗೇನಾದ್ರೂ ಪದೇ ಪದೇ ಕೆಮ್ಮು ಬರ್ತಾ ಇದ್ರೆ ಜಾಗರೂಕರಾಗಿರಿ, ನಿರ್ಲಕ್ಷ ಮಾಡಿದ್ರೆ ಟಿಬಿ ಅತ್ಯಂತ ಅಪಾಯಕಾರಿ.
ಇದು ಕೊರೋನಾ, ಡೆಂಗ್‌ನಂತೆ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತೆ. ಹಾಗೂ ಇದು ಸಾವಿಗೂ ಕಾರಣವಾಗುತ್ತದೆ.
TB ಕಾಯಿಲೆಯಿದ್ದರೂ ಅನೇಕ ಜನರು ಇದರ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಟಿಬಿಯ ಪ್ರಮುಖ ಲಕ್ಷಣವೆಂದರೆ ಕೆಮ್ಮು. ಕೆಮ್ಮಿನೊಂದಿಗೆ ರಕ್ತಮಿಶ್ರಿತ ಕಫ ಕೂಡ ಇರುತ್ತದೆ. ರಾತ್ರಿ ಬೆವರುವುದು, ತೂಕ ಕಡಿಮೆಯಾಗುವುದು, ಜ್ವರ, ಆಯಾಸ, ಶೀತ ಕೂಡಾ ಈ ರೋಗದ ಚಿಹ್ನೆಗಳು. ರೋಗಿಗಳಿಂದ ದೂರವಿದ್ದರೆ, ಟಿಬಿಯಿಂದ ದೂರ ಇರಬಹುದು. ಇದಲ್ಲದೆ ತಂಬಾಕು ಮತ್ತು ಮದ್ಯಪಾನದಿಂದ ದೂರವಿರಿ.