ಉತ್ತರಪ್ರದೇಶ: ಮದ್ರಸಾ ತರಗತಿ ಆರಂಭದ ವೇಳೆ ರಾಷ್ಟ ಗೀತೆ ಕಡ್ಡಾಯ - ಆದೇಶ ಹೊರಡಿಸಿದ್ದು ಯಾರು ಗೊತ್ತಾ?
Friday, March 25, 2022
ಲಕ್ನೋ: ಮದರಸಾಗಳಲ್ಲಿ ತರಗತಿ ಆರಂಭಕ್ಕೂ ಮುನ್ನ ಪ್ರಾರ್ಥನಾ ಗೀತೆಯೊಂದಿಗೆ ಕಡ್ಡಾಯವಾಗಿ ರಾಷ್ಟ್ರಗೀತೆಯನ್ನು ಪಠಿಸಬೇಕು ಎಂದು ಉತ್ತರಪ್ರದೇಶ ಮದರಸಾ ಶಿಕ್ಷಣ ಮಂಡಳಿಯು ತಿಳಿಸಿದೆ.
ಮದರಸಾ ಶಿಕ್ಷಣ ಮಂಡಳಿಯ ಅಧ್ಯಕ್ಷ ಇಫ್ತಿಕಾರ್ ಅಹ್ಮದ್ ಜಾವೇದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇದೇ ವೇಳೆ ಹಾಜರಾತಿ ಮತ್ತು ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಹಲವಾರು ಇತರ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.