-->
ads hereindex.jpg
ಜೈಲಿನಲ್ಲೇ ತಯಾರಿ ನಡೆಸಿ IIT ಪರೀಕ್ಷೆಯಲ್ಲಿ Rank ಗಳಿಸಿದ ಆರೋಪಿ

ಜೈಲಿನಲ್ಲೇ ತಯಾರಿ ನಡೆಸಿ IIT ಪರೀಕ್ಷೆಯಲ್ಲಿ Rank ಗಳಿಸಿದ ಆರೋಪಿ

ಬಿಹಾರ: ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಿಹಾರದ ಯುವಕನೊಬ್ಬ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ರೂರ್ಕಿ ನಡೆಸಿದ ಸ್ನಾತಕೋತ್ತರ ಜಂಟಿ ಪ್ರವೇಶ ಪರೀಕ್ಷೆ ಪಾಸಾಗಿದ್ದಲ್ಲದೇ 54ನೇ ರ್ಯಾಂಕ್ ಪಡೆದಿದ್ದಾನೆ.
ನವಾಡ ಜೈಲಿನಲ್ಲಿರುವ ವಿಚಾರಣಾಧೀನ ಕೈದಿ  22 ವರ್ಷದ  ಕೌಶಲೇಂದ್ರ ಕುಮಾರ್ ಅಲಿಯಾಸ್ ಸೂರಜ್ ಈ ಸಾಧನೆ ಮಾಡಿದ ಯುವಕ. ಈ ವರ್ಷ ಫೆಬ್ರವರಿ 13 ರಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ರೂರ್ಕಿ, ದೇಶದ ವಿವಿಧ ಕೇಂದ್ರಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕೌಶಲೇಂದ್ರ ಕುಮಾರ್ 54 ನೇ Rank ಗಳಿಸಿದ್ದಾರೆ. ಕೌಶಲೇಂದ್ರ ಕುಮಾರ್ ಬಿಹಾರದ ವಾರ್ಸಾಲಿಗಂಜ್ ಪಟ್ಟಣದ ಮೋಸ್ಮಾ ನಿವಾಸಿ.

2021 ಏಪ್ರಿಲ್‌ನಲ್ಲಿ ಮೋಸ್ಮಾ ಗ್ರಾಮದಲ್ಲಿ  ಎರಡು ಗುಂಪುಗಳ ನಡುವೆ ನಡೆದ ಚರಂಡಿಗೆ ಸಂಬಂಧಿಸಿದ ವಿವಾದದ ವಿಕೋಪಕ್ಕೆ ತಿರುಗಿ ಪರಸ್ಪರ ಗಲಾಟೆಯಾಗಿತ್ತು. ಈ ಗಲಾಟೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಸೂರಜ್ ಮತ್ತು ಇತರ ಹಲವರನ್ನು ಬಂಧಿಸಿ ನಾವಡಾ ಜೈಲಿನಲ್ಲಿ ಇರಿಸಲಾಗಿತ್ತು. 

Ads on article

Advertise in articles 1

advertising articles 2

IMG_20220827_133242

Advertise under the article

IMG-20220907-WA0033 IMG_20220827_133242