
ಮುನ್ನಾದಿನ ರಾತ್ರಿ social media ದಲ್ಲಿ ಗಂಡನ ಜೊತೆ ವೀಡಿಯೋ ಮಾಡಿದ್ದ ಆಲ್ಬಂ ನಟಿ ಮರುದಿನ ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ದುಬೈ: ರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಗಂಡನ ಜೊತೆ ಬ್ಲಾಗ್ ವೀಡಿಯೋ ಮಾಡಿದ್ದ ಕೇರಳ ಮೂಲದ ಯುವತಿಯೋರ್ವಳು ಮರುದಿನ ಬೆಳಗ್ಗೆ ತನ್ನ ಫ್ಲ್ಯಾಟ್ ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ತಿಳಿದುಬಂದಿದ್ದು, ಆದರೆ ಈ ಸಾವಿನ ಬಗ್ಗೆ ಯುವತಿ ಮನೆಯವರು ಮತ್ತು ಮಿತ್ರರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತ ಯುವತಿಯನ್ನು ಕೇರಳದ ಕಲ್ಲಿಕೋಟೆಯ ಬಾಲುಶೇರಿ ನಿವಾಸಿ ರಿಫಾ ಎಂದು ಗುರುತಿಸಲಾಗಿದೆ. ಈಕೆ ಹಲವು ಮಲಯಾಳಂ ಆಲ್ಬಂ ಸಾಂಗ್‌ಗಳಲ್ಲಿ ನಟಿಸಿದ್ದು, ಇತ್ತೀಚೆಗೆ ಆಹಾರ, ಫ್ಯಾಷನ್, ಸಂಸ್ಸ್ಕತಿ ಮೊದಲಾದ ವಿಚಾರದಲ್ಲಿ ಬ್ಲಾಗ್ ಮಾಡುತ್ತಿದ್ದಳು.
ಮೆಹ್ನು ಎಂಬಾತನನ್ನು ಮದುವೆಯಾಗಿದ್ದ ರಿಫಾ ಗೆ ಸಣ್ಣ ಹೆಣ್ಣು ಮಗುವೊಂದಿದೆ.
ಮೃತದೇಹವನ್ನು ಊರಿಗೆ ತರಲಾಗುವುದು ಎಂದು ತಿಳಿದುಬಂದಿದೆ.