ಉಡುಪಿಯಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ; SDPI ರಾಜ್ಯ ಅಧ್ಯಕ್ಷ ಮಜೀದ್
Monday, March 28, 2022
ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ದ್ವೇಷ ರಾಜಕಾರಣ ಮಾಡಿ, ಅಕ್ರಮ ಕಟ್ಟಡದ ಹೆಸರಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷರ ಕಟ್ಟಡ ತೆರವು ಮಾಡಿದ್ದಾರೆ ಅಂತ ಎಸ್ ಡಿ ಪಿ ಐ ರಾಜ್ಯ ಅಧ್ಯಕ್ಷ ಮಜೀದ್ ಹೇಳಿದ್ದಾರೆ.
ಉಡುಪಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅವರ ಹೋಟೆಲ್ ತೆರವು ವಿಚಾರಕ್ಕೆ ಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಜೀದ್, ಅಕ್ರಮ ಕಟ್ಟಡದ ಹೆಸರಲ್ಲಿ ಜಿಲ್ಲಾಧ್ಯಕ್ಷರ ಕಟ್ಟಡ ತೆರವು ಮಾಡಿದ್ದಾರೆ. ಇದು ಜಾಮಿಯಾ ಮಸೀದಿಯ ಕಟ್ಟಡ. ನಗರದಲ್ಲಿಜಾಮಿಯಾ ಮಸೀದಿಯ ಕಟ್ಟಡ ಮಾತ್ರ ಅನಧಿಕೃತವೇ, ಶಾಸಕ ರಘಪತಿ ಭಟ್ರೆ, ನಿಮಗೆ ಧೈರ್ಯ ಇದ್ರೆ, ಎಂಎಲ್ ಎ ಆಗಿದ್ರೆ ಶ್ವೇತ ಪತ್ರ ಹೊರಡಿಸಿ ಈ ಕಟ್ಟಡಕ್ಕೆ ಪರವಾನಗಿ ಕೊಟ್ಟಿದ್ದೀರಿ, ತೆರಿಗೆ ಪಡೆದಿದ್ದೀರಿ. ಹೊಟೇಲ್ ವಿಸ್ತರಣೆ ಮಾಡಿದ್ದಾರೆ ನಿಜ ಹೆಚ್ಚುವರಿ ದಂಡ ಕಟ್ಟಿ ಸಕ್ರಮ ಕಟ್ಟಡ ಮಾಡಬಹುದಿತ್ತು. ಆದರೆ
ದ್ವೇಷದ ರಾಜಕಾರಣಕ್ಕೆ ಮಸೀದಿ ಕಟ್ಟಡ ಬಲಿತಾಗಿದೆ ಅಂತ ಆಕ್ರೋಶ ಹೊರ ಹಾಕಿದ್ದಾರೆ..