ಉಡುಪಿ SDPI ಜಿಲ್ಲಾಧ್ಯಕ್ಷ ಗೆ ಸೇರಿದ ಹೋಟೆಲ್ ತೆರವು- ಹಿಜಾಬ್ ಬಗ್ಗೆ ಮಾತನಾಡಿದ್ದಕ್ಕೆ ಎಂದು ಆರೋಪ!
Saturday, March 26, 2022
ಉಡುಪಿಯ ಮಸೀದಿ ರಸ್ತೆಯಲ್ಲಿ ಇರುವ ಹೋಟೆಲ್ ನ್ನು ನಗರಸಭೆಯವರು ಅನಧಿಕೃತ ಕಟ್ಟಡ ಅಂತ ತೆರವುಗೊಳಿಸಿದ್ದಾರೆ.
ಎಸ್ ಡಿಪಿಐ ಜಿಲ್ಲಾಧ್ಯಕ್ಷರ ನಜೀರ್ ಅವರಿಗೆ ಸೇರಿದ ಝುರಾ ಹೋಟೆಲ್‌ನ್ನು ತೆರವುಗೊಳಿಸಬೇಕು ಅಂತ ನಗರ ಸಭೆಯವರು ನೋಟಿಸ್ ನೀಡಿದ್ದರು, ಆದರೆ ತೆರವುಗೊಳಿಸದೇ ಇರುವ ಹಿನ್ನೆಲೆಯಲ್ಲಿ ಇಂದು ನಗರಸಭೆಯವರೇ ಬಂದು ತೆರವುಗೊಳಿಸಲು ಮುಂದಾಗಿದ್ದಾರೆ.
ಇನ್ನೂ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ, ಉಡುಪಿಯ ಎಸ್‌ಡಿಪಿಐ ಜಿಲ್ಲಾಧ್ಯಕ್ಷ, ಹೋಟೆಲ್ ಮಾಲಕ ನಜೀರ್, ಹಿಜಾಬ್ ವಿಚಾರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಪರವಾಗಿ ಮಾತಡಿದ್ದೇ ತೆರವಿಗೆ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷರ ಹೆಸರಿನಲ್ಲಿ ತೆರವುಗೊಳಿಸುತ್ತಿದ್ದಾರೆ. ಇದು ಅಕ್ರಮ ಕಟ್ಟಡ ಅಲ್ಲ ಮಸೀದಿ ಜಾಗದಲ್ಲಿ ಕಟ್ಟಿದ್ದು. ನಗರ ಸಭೆ ನೋಟಿಸ್ ನೀಡಿದ ಬಳಿಕ ಕೋರ್ಟ್ ಹೋಗಿದ್ದೇವೆ. ಅಲ್ಲಿ ನಮ್ಮ ಅರ್ಜಿ ರಿಜೆಕ್ಟ್ ಆಗಿ ಎಂಟು ತಿಂಗಳು ಆಗಿದೆ. ಎಂಟು ತಿಂಗಳ ಕಾಲ ಇವರಿಗೆ ಯಾವುದೇ ಸಮಸ್ಯೆ ಇರಲಿಲ್ಲ ಹಿಜಾಬ್ ಕುರಿತು ಮಾತನಾಡಿದ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ.ಈ ಕುರಿತು ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಅಂತ ಎಸ್‌ಡಿಪಿಐ ಜಿಲ್ಲಾಧ್ಯಕ್ಷರ ನಜೀರ್ ಹೇಳಿದ್ದಾರೆ..