ಬಹಿರ್ದೆಸೆಗೆ ಹೋಗಿದ್ದ ಬಾಲಕಿಯನ್ನು ನೋಡಿದ ಆರೋಪಿ ಕೊಡಲಿಯಿಂದ ಆಕೆಯ ರುಂಡ ಬೇರ್ಪಡಿಸಿದ್ದ. ಬಳಿಕ ರುಂಡ ಹಿಡಿದುಕೊಂಡು ತನ್ನ ಮನೆಗೆ ಬಂದಿದ್ದು, ಆತಂಕಗೊಂಡ ಪತ್ನಿ ವಿಚಾರಿಸಿದಾಗ ಆಕೆಯನ್ನೂ ಬೆದರಿಸಿದ್ದ.
ಈ ಆರೋಪಿ ಮಾದಕ ವಸ್ತು ವ್ಯಸನಿಯಾಗಿದ್ದು, ಕೊಲೆಯಾದ ಬಾಲಕಿ ಕುಟುಂಬದವರ ಜೊತೆ ವೈಮನಸ್ಯವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.