SDPI ಮೇಲೆ ಫಂಡಿಂಗ್ ಆರೋಪ ಮಾಡಿದ ಸತ್ಯಜಿತ್ ಸುರತ್ಕಲ್ - ತಾಕತ್ತಿದ್ದರೆ 24 ಗಂಟೆಯೊಳಗೆ ಸಾಕ್ಷಿ ಸಮೇತ ನಿರೂಪಿಸಿ; ಅಬೂಬಕ್ಕರ್ ಕುಳಾಯಿ
Saturday, March 5, 2022
ಮಂಗಳೂರು; ಖಾಸಗಿ ಚಾನೆಲ್ ನ ಸಂದರ್ಶನ ಸಂದರ್ಭದಲ್ಲಿ ಸತ್ಯಜಿತ್ ಸುರತ್ಕಲ್ ಎಸ್‌ಡಿಪಿಐ ಮೇಲೆ ಕಪೋಲಕಲ್ಪಿತ ಫಂಡಿಂಗ್ ಆರೋಪ ಹೊರಿಸಿರುವುದು ಖಂಡನಾರ್ಹ, ಹಾಗೂ ಮಾಡಿದ ಆರೋಪವನ್ನು ತಾಕತ್ತಿದ್ದರೆ 24 ಗಂಟೆಯೊಳಗೆ ಸಾಕ್ಷಿ ಸಮೇತ ನಿರೂಪಿಸಲಿ ಎಂದು ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಸವಾಲು ಹಾಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷ, ಸುರತ್ಕಲ್ ಭಾಗದಲ್ಲಿ ಅಶಾಂತಿ, ದೊಂಬಿ ಹಿಂದೂ-ಮುಸ್ಲಿಮರ ನಡುವೆ ಬಿನ್ನಭಿಪ್ರಾಯ ಸೃಷ್ಟಿಸಿ ರಾಜಕೀಯವಾಗಿ ಬೆಳೆಯಬೇಕು ಎಂಬ ಆಸೆಯು ಈಡೇರದೆ ಸಂಘಪರಿವಾರದ ಮೇಲುಸ್ತರದ ನಾಯಕರು ಇವರನ್ನು ಯೂಸ್ ಎಂಡ್ ತ್ರೋ ಆಗಿ ಬಳಸಿದ ಕೋಪವನ್ನು ತೀರಿಸಲು ಇನ್ನೊಂದು ರಾಜಕೀಯ ಪಕ್ಷದ ಮೇಲೆ ಸುಳ್ಳಾರೋಪ ಮಾಡಿ ಬಿಜೆಪಿ ಮೇಲಿರುವ ಕೋಪವನ್ನು ಈ ರೀತಿಯಲ್ಲಿ ತೋರ್ಪಡಿಸುವುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.
ಅದಲ್ಲದೇ ಹಲವು ವರ್ಷಗಳ ಹಿಂದೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಲಭೆ ಸೃಷ್ಟಿಸಲು ನೇತೃತ್ವ ನೀಡಿದ್ದ ಸತ್ಯಜಿತ್, ಉಮಾ ಭಾರತಿ, ಪ್ರಹ್ಲಾದ್ ಜೋಶಿ, ಸೇರಿದಂತೆ ಹಲವಾರು ಸಂಘಪರಿವಾರ ನಾಯಕರು ಇಂದು ಶಾಸಕ, ಸಚಿವ, ಸಂಸದರಾಗಿದ್ದಾರೆ ,ಆದರೆ ಸತ್ಯಜಿತ್ ನ್ನು ಸಂಘಪರಿವಾರ ಬಳಸಿ ಬಿಸಾಕಿ ಮೂಲೆಗುಂಪು ಮಾಡಿದನ್ನು ಇವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗದೇ ಇದೀಗ ಸುರತ್ಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಗಾಗಿ ಎಸ್‌ಡಿಪಿಐ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ.
ಸತ್ಯಜಿತ್ ಸುರತ್ಕಲ್ ಮಾಡಿದ ಆರೋಪವನ್ನು 24 ಗಂಟೆಯೊಳಗೆ ಸಾಕ್ಷಿ ಸಮೇತ ಬಹಿರಂಗ ಪಡಿಸಬೇಕು. ಇಲ್ಲದಿದ್ದಲ್ಲಿ ಪಕ್ಷವೂ ಕಾನೂನು ಕ್ರಮ ಜರುಗಿಸಲಿದೆ. ಮಾತ್ರವಲ್ಲದೆ ಈ ವಿಚಾರದಲ್ಲಿ ಎಸ್‌ಡಿಪಿಐ ಬಹಿರಂಗ ಚರ್ಚೆಗೆ ತಯಾರಿದೆ, ಆರೋಪ ನಿರೂಪಿಸುವ ಧೈರ್ಯ ವಿದ್ದರೆ ಸತ್ಯಜಿತ್ ಸುರತ್ಕಲ್ ಚರ್ಚೆಗೆ ಬರಲಿ ಎಂದು ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.