
ಉಡುಪಿ ಜನತೆಯಲ್ಲಿ ಅಚ್ಚರಿ ಮೂಡಿಸಿದ ಪೇಜಾವರ ಶ್ರೀಗಳ ಆಟೋ ಪ್ರಯಾಣ
Saturday, March 5, 2022
ಸ್ವಾಮಿಜೀಗಳು ಕಾರ್‌ನಲ್ಲಿ ಓಡಾಡುವುದು ಸಾಮಾನ್ಯ, ಆದ್ರೆ ಉಡುಪಿ ಪೇಜಾವರ ಶ್ರೀಗಳ ಆಟೋ ಸಂಚಾರದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ.
ಉಡುಪಿಯ ಕಡಿಯಾಳಿ ದೇವಳಕ್ಕೆ ನೂತನ ಧ್ವಜಮರವನ್ನು ಹೊತ್ತು ತರುವ ಮೆರವಣಿಗೆಯಲ್ಲಿ ಭಾಗವಹಿಸಿದ ಶ್ರೀಗಳಿಗೆ ಮುಂದಿನ ಕಾರ್ಯಕ್ರಮಕ್ಲೆ ತೆರಳುವ ಅವಸರವಿತ್ತು .
ಆದರೆ ಮೆರವಣಿಗೆಯ ಕಾರಣಕ್ಕೆ ರಸ್ತೆಯುದ್ದಕ್ಕೂ ವಾಹನಗಳು ಸಾಲು ಸಾಲು ಬರುತ್ತಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು . ಆದ್ದರಿಂದ ಶ್ರೀಗಳಿಗೆ ತಮ್ಮ ವಾಹನದಲ್ಲಿ ತೆರಳಿದ್ರೆ ವಿಳಂಬ ಅನ್ನೋದು ಮನದಟ್ಟಾಗಿದೆ .
ಹೀಗಾಗಿ ಥಟ್ಟನೆ ಅದೇ ದಾರಿಯಲ್ಲಿ ಬಂದ ರಿಕ್ಷಾವನ್ನು ನಿಲ್ಲಿಸಿ ತಾವು ಅದರಲ್ಲಿ ಕುಳಿತು ಒಳಮಾರ್ಗವಾಗಿ ಉಡುಪಿ ಅನಂತೇಶ್ವರ ದೇವಸ್ಥಾನದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ತೆರಳಿದರು .ಅಲ್ಲಿ ನೆರೆದಿದ್ದ ನೂರಾರು ಮಂದಿ ಚಕಿತರಾಗಿ ಈ ದೃಶ್ಯವನ್ನು ಕಂಡರು