ನಟಿಯಿಂದ ಸಿನಿಮಾ ನಿರ್ದೇಶನ ಮೇಲೆ ನಿರಂತರ ಅತ್ಯಾಚಾರದ ಆರೋಪ: ಪೊಲೀಸ್ ದೂರು ದಾಖಲು
Thursday, March 31, 2022
ಪುಣೆ(ಮಹಾರಾಷ್ಟ್ರ): ಸಿನಿಮಾ ನಿರ್ದೇಶಕನೊಬ್ಬ ನಟಿಯ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣವೊಂದು ಮಹಾರಾಷ್ಟ್ರದ ಪುಣೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ನಿರ್ದೇಶಕ ನಟಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದು, ಈ ದುಷ್ಕೃತ್ಯದ ವೀಡಿಯೊ ಮಾಡಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೀಗ ನಟಿ ನಿರ್ದೇಶಕನ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ನಿರ್ದೇಶಕ 2017ರಿಂದಲೂ ನಿರಂತರವಾಗಿ ನಟಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಆದರೆ ಇದೀಗ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. 5 ವರ್ಷಗಳ ಹಿಂದೆ ಪಾರ್ಟಿ ಕೊಡುವ ನೆಪದಲ್ಲಿ ಈ ನಿರ್ದೇಶಕ ನಟಿಯನ್ನು ಸ್ನೇಹಿತನ ಫ್ಲ್ಯಾಟ್ಗೆ ಕರೆಯಿಸಿಕೊಂಡು ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಅಂದಿನ ದೃಶ್ಯವನ್ನು ವೀಡಿಯೊದಲ್ಲಿ ಸೆರೆ ಹಿಡಿದಿದ್ದಾನೆ. ಇದಾದ ಬಳಿಕ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸಿ, ನಿರಂತರವಾಗಿ ದುಷ್ಕೃತ್ಯವೆಸಗಿದ್ದಾನೆ. ಇದೀಗ ಸಂತ್ರಸ್ತೆ ವಿಶ್ರಾಂತವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
21 ವರ್ಷದ ಯುವತಿ ಬಾಲಿವುಡ್ ನಲ್ಲಿ ನಟಿಯಾಗಿ ಕೆಲಸ ಮಾಡ್ತಿದ್ದಳು. ಈ ನಡುವೆ ಆಕೆಗೆ ಅಮಿತ್ ಸಿತ್ಲಾನಿ ಎಂಬ ನಿರ್ದೇಶಕನ ಪರಿಚಯವಾಗಿದೆ. 2017ರಲ್ಲಿ ಪುಣೆಯ ಟಿಂಗ್ರೆ ನಗರದಲ್ಲಿನ ಸ್ನೇಹಿತನ ಫ್ಲ್ಯಾಟ್ಗೆ ಪಾರ್ಟಿ ನೀಡುವ ನೆಪದಲ್ಲಿ ನಟಿಯನ್ನು ಕರೆಯಿಸಿಕೊಂಡಿದ್ದಾನೆ. ಆಗ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ. ಇದರ ವೀಡಿಯೋ ಮಾಡಿದ್ದು, ವೈರಲ್ ಮಾಡುವ ಬೆದರಿಕೆ ಹಾಕಿ ಮೇಲಿಂದ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಪುಣೆಯ ವಿವಿಧ ಹೋಟೆಲ್ಗಳಿಗೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.
"ಸಿನಿಮಾ ಇಂಡಸ್ಟ್ರಿಯಲ್ಲಿ ತನಗೆ ಸಾವಿರಾರು ಫಾಲೋವರ್ಸ್ ಇದ್ದು, ನಿನ್ನ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು" ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಇದೀಗ ಪೊಲೀಸ್ ಠಾಣೆಗೆ ಮೆಟ್ಟಿಲೇರಿದ ನಟಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.