PUC ಪರೀಕ್ಷೆಗೆ ಗೈರಾದ ಇಬ್ಬರು ಉಡುಪಿ ಯ ಹಿಜಾಬ್ ಹೋರಾಟಗಾರ್ತಿಯರು
Tuesday, March 29, 2022
ಹಿಜಾಬ್ ಹೋರಾಟ ಆರಂಭಿಸಿದ ಉಡುಪಿ ಸರ್ಕಾರಿ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಇಂದು ಪ್ರಥಮ ಪಿಯುಸಿ ಪರೀಕ್ಷೆಗೆ ಗೈರಾಗಿದ್ದಾರೆ.
ಮುಸ್ಕಾನ್ ಹಾಗೂ ಸಫಾ ಗೈರಾದ ಮುಸ್ಲಿಂ ವಿದ್ಯಾರ್ಥಿನಿಯರು. ಹಿಜಾಬ್ ಹೋರಾಟ ಮೊದಲು ಆರಂಭ ಆಗಿದ್ದು ಉಡುಪಿ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರಿಂದ.
ಅದರಲ್ಲಿ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು. ಉಳಿದ ನಾಲ್ಕು ಮಂದಿ ದ್ವೀತಿಯ ಪಿಯುಸಿ. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಮುಸ್ಕಾನ್‌ಗೆ ಇಂದು ಕೆಮಿಸ್ಟ್ರಿ ಪರೀಕ್ಷೆ ಇತ್ತು. ವಾಣಿಜ್ಯ ವಿಭಾಗದ ಸಫಾಳಿಗೆ ಬಿಸಿನೆಸ್ ಸ್ಟಡಿ ಪರೀಕ್ಷೆ ಇತ್ತು. ಆದ್ರೆ ಇಬ್ಬರೂ ಹಿಜಾಬ್ ಕಾರಣದಿಂದ ಪರೀಕ್ಷೆ ಗೈರಾಗಿದ್ದರು ಎನ್ನಲಾಗಿದೆ.