ಮಂಗಳೂರು: ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದ ಯುವಕ 4ನೇ ಮಹಡಿಯಿಂದ ಬಿದ್ದು ಸಾವು
Tuesday, March 29, 2022
ಮಂಗಳೂರು: ನಿರ್ಮಾಣ ಹಂತದಲ್ಲಿರುವ ಬಹು ಮಹಡಿ ಕಟ್ಟಡದಿಂದ ಬಿದ್ದು ಯುವಕನೋರ್ವ ಮೃತಪಟ್ಟ ದುರಂತವೊಂದು ನಗರದ ಪಡೀಲ್ ಬಳಿ ನಡೆದಿದೆ.
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನಿವಾಸಿ ವಿಜಯ್ (22) ಮೃತ ದುರ್ದೈವಿ.
ವಿಜಯ್ ಪಡೀಲ್ ಗೇಟ್ ಎಂಬ ವಾಣಿಜ್ಯ ಮಳಿಗೆಯ ಬಹು ಮಹಡಿ ಕಟ್ಟಡದ ನಾಲ್ಕನೇ ಮಳಿಗೆಯಲ್ಲಿ ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದರು. ನಾಲ್ಕನೇ ಮಳಿಗೆಯ ಹೊರಭಾಗದಲ್ಲಿ ಸ್ಟೆಪ್ ಹೋಲ್ಡ್ ಮೇಲೆ ನಿಂತು ಪ್ಯಾಬ್ರಿಕೇಶನ್ ಕೆಲಸದ ಅಳತೆ ಮಾಡುತ್ತಿದ್ದರು. ಈ ಸಂದರ್ಭ ವಿಜಯ್ ಆಯ ತಪ್ಪಿ ಸುಮಾರು 60 ಅಡಿ ಕೆಳಗೆ ಕಾಂಕ್ರೀಟ್ ಹಾಕಿ ಮಾಡಿರುವ ನೀರಿನ ಟ್ಯಾಂಕಿನ ಮೇಲೆ ಬಿದ್ದಿದ್ದಾರೆ. ಪರಿಣಾಮ ತಲೆಗೆ ತೀವ್ರ ಗಾಯಗೊಂಡ ಅವರನ್ನು ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.