ಉಡುಪಿ ಪ್ರತಿಭಟನೆಯಲ್ಲಿ ಗೋಮುಖ ವ್ಯಾಘ್ರ- ವೇಷ ಧರಿಸಿ ಗಮನಸೆಳೆದ Post Man ( Video)
Tuesday, March 29, 2022
ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿಉಡುಪಿಯ ಮುಖ್ಯ ಅಂಚೆ ಕಚೇರಿ ಎದುರು ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯಲ್ಲಿ
ಗೋಮುಖವ್ಯಾಘ್ರ ವೇಷ ವಿಶೇಷ ಗಮನ ಸೆಳೆಯಿತು.
ಅಂಚೆ ಇಲಾಖೆಗೆ ತಟ್ಟಿರುವ ಖಾಸಗೀಕರಣದ ಭೂತದ ವಿರುದ್ಧ ಉಡುಪಿ ಅಂಚೆ ಕಚೇರಿಯ ಪೋಸ್ಟ್‌ಮೆನ್ ರಾಘವೇಂದ್ರ ಪ್ರಭು, ವಿಶೇಷ ವೇಷ ಧರಿಸಿ ಧರಣಿಯಲ್ಲಿ ಎಲ್ಲರ ಗಮನ ಸೆಳೆದರು.
‘ಸರಕಾರಿ ಇಲಾಖೆಯನ್ನು ಖಾಸಗಿ ಸಂಸ್ಥೆಗಳು ಆಕ್ರಮಣ ಮಾಡುತ್ತಿವೆ. ಗೋವಿನ ಮುಖವಾಡ ಹಾಕಿಕೊಂಡು ಬರುವ ಈ ಖಾಸಗಿ ಸಂಸ್ಥೆಗಳು ನಿಜವಾದ ಹುಲಿಯಾಗಿರುತ್ತವೆ. ಅವರು ಎಂದಿಗೂ ಸಾಮಾನ್ಯ ನಾಗರಿಕರ, ನೌಕರರ ಹಾಗೂ ಗ್ರಾಹಕರ ಪರವಾಗಿ ಇರುವುದಿಲ್ಲ. ಅವರಿಗೆ ಲಾಭ ಮಾತ್ರ ಮುಖ್ಯವಾಗಿರುತ್ತದೆ. ಆದುದರಿಂದ ಈ ಖಾಸಗೀಕರಣ ನಮಗೆ ಬೇಡ ಎಂಬ ಸಂದೇಶ ಸಾರಲು ಈ ವೇಷ ಹಾಕಿದ್ದೇನೆ’ ಎಂದು ರಾಘವೇಂದ್ರ ಪ್ರಭು ತಿಳಿಸಿದರು.