ಮತ್ತೆ ದಿಢೀರ್ ಹೆಚ್ಚಳಗೊಂಡ petrol, diesel ದರ: ಮಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ ಎಷ್ಟು?
Thursday, March 24, 2022
ಬೆಂಗಳೂರು: ರಷ್ಯಾ- ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಇಂಧನ ಬೆಲೆ ಮತ್ತೆ ಹೆಚ್ಚಳಗೊಂಡಿದೆ.
ಪೆಟ್ರೋಲ್ ಬೆಲೆಯಲ್ಲಿ ದಿಢೀರ್ 3 ರೂ ಹೆಚ್ಚಳಗೊಂಡಿದ್ದು, ಇದು ದೇಶದಾದ್ಯಂತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ. 102.26 ಆಗಿದ್ದರೆ ಡೀಸೆಲ್ ದರ ರೂ. 86.58 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.91, ರೂ. 111.67, ರೂ. 106.34 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 92.95, ರೂ. 95.85, ರೂ. 91.42 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 97.01 ಆಗಿದ್ದರೆ ಡೀಸೆಲ್ ದರ ರೂ. 88.27 ಆಗಿದೆ.
ದಕ್ಷಿಣ ಕನ್ನಡದಲ್ಲಿ ಪೆಟ್ರೋಲ್ ದ ರೂ. 101.44 (18 ಪೈಸೆ ಏರಿಕೆ) ಆಗಿದ್ದು, ಡೀಸೆಲ್ ದರ ರೂ. 85.81 ಆಗಿದೆ.