ಈ ಬಾರಿ ಮಾವು ಸಿಹಿಯಲ್ಲ ಕಹಿ- ಯಾಕೆ ಗೊತ್ತಾ?
Friday, March 25, 2022
ಬೆಂಗಳೂರು: ರಾಜ್ಯದ ಮಾವು ಕೃಷಿ ಮಾಡುವ ಕಡೆ ಅಕಾಲಿಕವಾಗಿ ಮಳೆಯಾದ ಹಿನ್ನೆಲೆಯಲ್ಲಿ ಮಾವಿನ ಮರಗಳು ತಡವಾಗಿ ಹೂ ಬಿಟ್ಟಿದ್ದು, ಇದು ಮಾವಿನ ಇಳುವರಿ ಕಡಿಮೆಯಾಗಲು ಕಾರಣವಾಗಿದೆ.
ಹವಾಮಾನ ವೈಪರೀತ್ಯಗಳಿಂದ ನಿರೀಕ್ಷಿತ ಮಟ್ಟದ ಫಲ ದೊರಕದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಮಾವಿನ ದರ ಹೆಚ್ಚಾಗಲಿದೆ. ಇದು ಜನ ಸಾಮಾನ್ಯರಿಗೆ ಕಹಿಯಾಗಲಿದೆ.
ಕೆಲವಡೆ ಬಿಟ್ಟ ಹೂಗಳು ಮತ್ತು ಮಿಡಿ ಮಾವುಗಳು ಗಾಳಿ ಮಳೆಗೆ ಉದುರಿ ಹೋಗಿದ್ದು, ಇನ್ನೂ ಹಲವಡೆ ಇನ್ನಷ್ಟೆ ಹೂ ಬಿಡ ಬೇಕಿದೆ.
ಮಾವು ಹೆಚ್ಚಾಗಿ ಬೆಳೆಯುವ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಹಾವೇರಿ, ಮೈಸೂರು, ಮಂಡ್ಯ ಮೊದಲಾದ ಜಿಲ್ಲೆಗಳಿಗೆ ಈ ಹವಾಮಾನ ವೈಪರೀತ್ಯ ತಟ್ಟಿದೆ.
ಒಟ್ಟಿನಲ್ಲಿ ಈ ಬಾರಿ ಮಾವು ಮಾರುಕಟ್ಟೆ ಗೆ ಬಂದ ಬಳಿಕವೇ ಅದರ ದರ ಗೊತ್ತಾಗಲಿದೆ.