30 ವರ್ಷಗಳ ನಂತರ ಕುಂಭ ರಾಶಿ ಪ್ರವೇಶಿಸುತ್ತಿರುವ ಶನಿ..!! ಈ ರಾಶಿಯವರಿಗೆ ಅದೃಷ್ಟ..!
Thursday, March 3, 2022
ಶನಿಯ ಸಂಚಾರವು ನಿಮಗೆ ಲಾಭದಾಯಕವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯವನ್ನು ತೋರಿಸಲು ನಿಮಗೆ ಸಾಕಷ್ಟು ಅವಕಾಶ ಸಿಗುತ್ತದೆ. ಉದ್ಯೋಗಸ್ಥರಿಗೆ ಈ ಅವಧಿ ಅನುಕೂಲಕರವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಚಿತ್ರಣವು ಉತ್ತಮವಾಗಿರುತ್ತದೆ. ಬಾಸ್ ಪ್ರತಿ ಕೆಲಸದಲ್ಲಿಯೂ ನಿಮ್ಮನ್ನು ಬೆಂಬಲಿಸುತ್ತಾರೆ. ಸ್ವಂತ ವ್ಯಾಪಾರ ಮಾಡುತ್ತಿರುವವರು ಅಪಾರ ಯಶಸ್ಸನ್ನು ಪಡೆಯುವ ಸಾಧ್ಯತೆ ಇರುತ್ತದೆ.
ವೃಷಭ ರಾಶಿ
ಕುಂಭ ರಾಶಿಗೆ ಶನಿ ಸಂಚಾರದ ಈ ಅವಧಿಯಲ್ಲಿ ನಿಮ್ಮ ಶ್ರಮದ ಫಲವನ್ನು ನೀವು ಪಡೆಯುವ ಸಾಧ್ಯತೆಯಿದೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ಬಯಸಿದ ಉದ್ಯೋಗವನ್ನು ಪಡೆಯುವ ಬಲವಾದ ಅವಕಾಶಗಳಿವೆ. ಈ ಸಮಯದಲ್ಲಿ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ.
ಸಿಂಹ ರಾಶಿ
ಶನಿಯ ಈ ಸಂಚಾರವು ತುಂಬಾ ಮಂಗಳಕರವಾಗಿರುತ್ತದೆ. ಕಠಿಣ ಪರಿಶ್ರಮಕ್ಕೆ ಸಂಪೂರ್ಣ ಫಲ ಸಿಗುವ ಸಾಧ್ಯತೆ ಇದೆ. ಕಾನೂನು ನಿರ್ಧಾರಗಳು ನಿಮ್ಮ ಪರವಾಗಿರುತ್ತವೆ. ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಈ ಅವಧಿಯಲ್ಲಿ ನಿಮ್ಮ ಮೇಲಧಿಕಾರಿಗಳು ನಿಮ್ಮ ಶ್ರಮವನ್ನು ನಿರ್ಲಕ್ಷಿಸುವುದು ಕಷ್ಟ. ಹಾಗಾಗಿ ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ.
ಕನ್ಯಾ ರಾಶಿ
ಶನಿಯ ಈ ಸ್ಥಾನವು ನಿಮಗೆ ಅನುಕೂಲಕರವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಪಡೆಯಬಹುದು. ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡುವ ಸಾಧ್ಯತೆಯಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಒಳ್ಳೆಯ ಸುದ್ದಿ ಕಾಣಬಹುದು. ಅನಿರೀಕ್ಷಿತ ಹಣಸ ಲಾಭದ ಬಲವಾದ ಅವಕಾಶಗಳಿವೆ.
ತುಲಾ ರಾಶಿ
ಶನಿಯ ಸಂಚಾರವು ನಿಮಗೆ ಶುಭಕರವಾಗಿರಲಿದೆ. ವಿದ್ಯಾರ್ಥಿಗಳಿಗೆ ಧನಾತ್ಮಕ ಸಮಯವಿದು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಬಯಸಿದ ಕೆಲಸ ಸಿಗುವ ಸಾಧ್ಯತೆಗಳು ಗೋಚರಿಸುತ್ತವೆ. ಈ ಅವಧಿಯಲ್ಲಿ ನೀವು ಉತ್ತಮ ವ್ಯವಹಾರವನ್ನು ಮುನ್ನಡೆಸಲು ಸಾಧ್ಯವಾಗುತ್ತದೆ.