
ಶಿವಮೊಗ್ಗ: ಮೃತ ಹರ್ಷ ಕುಟುಂಬದವರಿಗೆ ಬಿಜೆಪಿ ಟಿಕೆಟ್ ನೀಡುತ್ತಾ?- ಗೃಹ ಸಚಿವರ ಮಾತು ಕೇಳಿ
Thursday, March 3, 2022
ಬೆಂಗಳೂರು: ಶಿವಮೊಗ್ಗ ದಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಸಂಘಪರಿವಾರದ ಕಾರ್ಯಕರ್ತ ಹರ್ಷ ಕುಟುಂಬದಲ್ಲಿ ಯಾರಿಗಾದರೂ ಒಬ್ಬರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಬೇಕೆಂದು ಒತ್ತಾಯಗಳು ಕೇಳಿಬಂದಿದ್ದವು.
ಈ ಒತ್ತಾಯಕ್ಕೆ ಗೃಹಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಯಿಸಿದ್ದು, ನಾವು ಹರ್ಷ ತಾಯಿಯ ಆಸೆಯಂತೆ ಆತನ ಸಾವಿಗೆ ನ್ಯಾಯ ದೊರಕಿಸಲಿದ್ದೇವೆ.
ಕಾಂಗ್ರೆಸ್‍ನವರ ಕಾಲದಲ್ಲಿ ಮೃತಪಟ್ಟವರಿಗೆಲ್ಲಾ ಟಿಕೆಟ್ ಕೊಟ್ಟಿದ್ದಾರಾ?. ಕಾಂಗ್ರೆಸ್ ಆಧಾರ ರಹಿತ ಟೀಕೆ ಮಾಡುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು.