ಶನಿದೇವನನ್ನು ಮೆಚ್ಚಿಸಲು ಏನು ಮಾಡಬೇಕು?..ಮುಂಜಾನೆ ಈ ಸಣ್ಣಪುಟ್ಟ ಕೆಲಸ ಮಾಡುವುದರಿಂದ ಏನಾಗುತ್ತೆ ಗೊತ್ತಾ..??
Thursday, March 31, 2022
ಶನಿ ದೇವನನ್ನು ಮೆಚ್ಚಿಸಲು, ಸೂರ್ಯೋದಯಕ್ಕೆ ಮೊದಲು ಅರಳಿ ಮರಕ್ಕೆ ನೀರನ್ನು ಅರ್ಪಿಸಬೇಕು ಎಂದು ನಂಬಲಾಗಿದೆ. ಸೂರ್ಯೋದಯಕ್ಕೂ ಮುನ್ನ ಅರಳಿ ಮರಕ್ಕೆ ನೀರು ಅರ್ಪಿಸುವ ವ್ಯಕ್ತಿಯ ಮೇಲೆ ಶನಿಯ ಮಹಾದಶಾ ಪರಿಣಾಮ ಬೀರುವುದಿಲ್ಲ ಎಂದು ಹಲವು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.
ಮಹರ್ಷಿ ದಧೀಚಿಯ ಮಗನಾದ ಪಿಪ್ಪಲಾದನು ಒಮ್ಮೆ ಬ್ರಹ್ಮನಿಗಾಗಿ ತೀವ್ರ ತಪಸ್ಸು ಮಾಡಿದನು. ಪಿಪ್ಪಲಾದನ ತಪಸ್ಸಿನಿಂದ ಸಂತುಷ್ಟನಾದ ಬ್ರಹ್ಮನು ಅವನಿಗೆ ವರವನ್ನು ಕೇಳುವಂತೆ ಕೇಳಿದನು. ಬ್ರಹ್ಮದೇವನು, ಪಿಪ್ಪಲಾದನ ಆಸೆಯನ್ನು ಪೂರೈಸಿ, ಅವನ ದೃಷ್ಟಿಯಲ್ಲಿ ಇತರ ಜೀವಿಗಳನ್ನು ಸುಡುವಂತ ವರವನ್ನು ಆಶೀರ್ವದಿಸಿದನು. ಅಂತಹ ವರವನ್ನು ಪಡೆದ ನಂತರ ಪಿಪ್ಪಲಾದ ಶನಿ ದೇವನನ್ನೇ ಕಾಡಿದ್ದ ಎಂದು ಹೇಳಲಾಗುತ್ತದೆ.
ಶನಿಯ ಮಹಾದಶ ಮಕ್ಕಳ ಮೇಲೆ ಏಕಿರುವುದಿಲ್ಲ?
ಶನಿಯ ಮಹಾದಶಾದಿಂದಾಗಿ ಪಿಪ್ಪಲಾದನು ತನ್ನ ಬಾಲ್ಯದಲ್ಲಿಯೇ ತಂದೆ-ತಾಯಿಯಿಂದ ದೂರವಾಗಿ ಅನಾಥನಾದನು ಎಂದು ಹೇಳಲಾಗುತ್ತದೆ. ಇದರ ಕಾರಣವನ್ನರಿತ ಪಿಪ್ಪಲಾದನು ಬ್ರಹ್ಮದೇವನಿಂದ ವರ ಪಡೆದು ಶನಿ ದೇವನನ್ನೂ ಕಾಡತೊಡಗಿದ್ದನು. ಈ ಸ್ಥಿತಿಯನ್ನು ಕಂಡ ಬ್ರಹ್ಮದೇವನು ಪಿಪ್ಪಲಾದನನ್ನು ತಡೆದು ಈ ವರದ ಬದಲಿಗೆ ಬೇರೆ ವರವನ್ನು ಕೇಳುವಂತೆ ಕೇಳಿದರು. ಆಗ ಪಿಪ್ಪಲಾದನು 12 ವರ್ಷಕ್ಕೂ ಕಡಿಮೆ ವಯಸ್ಸಿನ ಯಾರನ್ನೂ ಶನಿ ಕಾಡುವಂತಿಲ್ಲ ಎಂಬ ವರವನ್ನು ಪಡೆದನು. ಹಾಗಾಗಿಯೇ, ಶನಿ ವಕ್ರದೃಷ್ಟಿ, ಶನಿ ಮಹಾದಶದಿಂದ ಪಾರಾಗಲು ಜನರು ಶಿವನ ಈ ರೂಪವನ್ನು ಪ್ರಾರ್ಥಿಸುತ್ತಾರೆ ಎನ್ನಲಾಗುತ್ತದೆ.