ಗರ್ಭಿಣಿ ಮೇಕೆ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ಕೊಂದ ಹಾಕಿದ ಆರೋಪಿ ಅರೆಸ್ಟ್
Thursday, March 31, 2022
ಕಾಸರಗೋಡು: ಕೇರಳ ರಾಜ್ಯದ ಕಾಸರಗೋಡಿನಲ್ಲಿ ಗರ್ಭಿಣಿ ಮೇಕೆಯ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ಕೊಂದ ಹಾಕಿರುವ ಆರೋಪದನ್ವಯ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಸೆಂಥಿಲ್ ಬಂಧಿತ ಆರೋಪಿ.
ಸೆಂಥಿಲ್ ಹೋಟೆಲ್ ಕಾರ್ಮಿಕನಾಗಿದ್ದ. ಈ ಬಗ್ಗೆ ಹೋಟೆಲ್ ಮಾಲಕರು ನೀಡಿರುವ ದೂರಿನನ್ವಯ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೇಕೆಯ ಮರಣೋತ್ತರ ಪರೀಕ್ಷೆ ನಡೆಸಿರುವ ಸರಕಾರಿ ಪಶು ವೈದ್ಯಾಧಿಕಾರಿಗಳು ಪ್ರಾಥಮಿಕ ಪರೀಕ್ಷೆಯಲ್ಲಿ ಮೇಕೆ ಅಸ್ವಾಭಾವಿಕ ಸಂಭೋಗಕ್ಕೆ ಒಳಗಾಗಿರುವುದು ಕಂಡುಬಂದಿದೆ. ವಿಸ್ತೃತ ವರದಿಯಲ್ಲಿ ಮಾತ್ರ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.