4ತಿಂಗಳ ಹಸುಗೂಸಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬಾಣಂತಿ..!!
Monday, March 28, 2022
ಮುದ್ದೇಬಿಹಾಳ: ಬಾಣಂತಿ ಯೊಬ್ಬರು ತಮ್ಮ ನಾಲ್ಕು ತಿಂಗಳ ಹಸುಗೂಸನ್ನೇ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಘಟನೆ ಮುದ್ದೇಬಿಹಾಳದಲ್ಲಿ ನಡೆದಿದೆ.
ಮುದ್ದೇಬಿಹಾಳ ಪಟ್ಟಣದ ಅಭ್ಯುದಯ ಪರೀಕ್ಷಾ ಕೇಂದ್ರದಲ್ಲಿ ಹಸುಗೂಸಿನೊಂದಿಗೆ ಬಂದು ಆಕೆ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದಾರೆ. ತಸ್ಲೀಮಾ ಮಕಾನದಾರ್ ತಮ್ಮ ನಾಲ್ಕು ತಿಂಗಳ ಹಸುಗೂಸಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದವರು. ಪರೀಕ್ಷಾ ಕೇಂದ್ರದ ಹೊರಗಡೆ ಆಶಾ ಕಾರ್ಯಕರ್ತೆಯ ಬಳಿ ಮಗುವನ್ನು ಬಿಟ್ಟು ಪರೀಕ್ಷೆಗೆ ಹಾಜರಾಗಿದ್ದರು.
ಬಾಹ್ಯ ಪರೀಕ್ಷಾರ್ಥಿಯಾಗಿ ತಸ್ಲೀಮಾ ಮಕಾನದಾರ್ ಪರೀಕ್ಷೆ ತೆಗೆದುಕೊಂಡಿದ್ದರು. ಆಶಾ ಕಾರ್ಯಕರ್ತೆ ಉಮಾ ಶಾರದಹಳ್ಳಿ ಹಸುಗೂಸಿನ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.