
Udupi- ಆದಷ್ಟು ಬೇಗ ಮಗನನ್ನು ಕರೆತನ್ನಿ- ಉಕ್ರೇನ್ ನಲ್ಲಿ ಸಿಲುಕಿದ ಮಗನ ಬಗ್ಗೆ ಆತಂಕದಲ್ಲಿ ತಂದೆ
ಉಕ್ರೇನ್‌ನಲ್ಲಿ ಉಡುಪಿ ಮೂಲದ ವಿದ್ಯಾರ್ಥಿಯೊರ್ವ ಸಿಲುಕಿಕೊಂಡಿದ್ದು, ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಧನಂಜಯ್ ಬಗ್ಲಿ ಅವರ ಹಿರಿಯ ರೋಹನ್ ಧನಂಜಯ್ ಬಗ್ಲಿ ಉಕ್ರೇನ್ ನ ಕಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ 5ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ
ರೋಹನ್ ಧನಂಜಯ್ ಅವರ ತಂದೆ ಡಾ.ಧನಂಜಯ್ ಬಗ್ಲಿ,
23ನೇ ತಾರೀಖಿನವರೆಗೂ ಪರಿಸ್ಥಿತಿ ಶಾಂತವಾಗಿತ್ತು ಅಂತ ತಿಳಿಸಿದ್ದ ಆದ್ರೆ 23ರ ಮಧ್ಯರಾತ್ರಿಯಿಂದ ಯುದ್ದ ಆರಂಭ ಆದ ಬಗ್ಗೆ ತಿಳಿಸಿದ್ದ ರೋಹನ್ ಹೇಳಿದ್ದ. ನಿನ್ನೆ ಅವನ ಜೊತೆಗೆ ಇದ್ದವರನ್ನು ಸೇಫ್ ಬಂಕರ್ಸ್ ಗೆ ಸ್ಥಳಾಂತರ ಮಾಡಿದ್ದಾರೆ
ಸದ್ಯಕ್ಕೆ ಅವರಿಗೆಲ್ಲ ಯಾವುದೇ ತೊಂದರೆ ಇಲ್ಲ, ಆದ್ರೆ ಈಗ ವಿಮಾನ ಹಾರಾಟ ಮಾಡುತ್ತಿಲ್ಲ, ಹೀಗಾಗಿ ಆ ದೇಶದ ಜೊತೆಗೆ ಸಂಪರ್ಕ ಮಾಡಿಕೊಂಡು ಸರ್ಕಾರ ಎಲ್ಲರನ್ನು ಲಿಫ್ಟ್ ಮಾಡಿದ್ರೆ ನಮ್ಮ ಆತಂಕ ದೂರವಾಗುತ್ತದೆ ಅಂತ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ..