
UDUPI- ಮಗನಿಗೆ ಆಹಾರ ಸಿಗ್ತಾ ಇಲ್ಲ- ತಂದೆಯ ಆತಂಕ
ಉಕ್ರೇನ್‌ನಲ್ಲಿ ವಿದ್ಯಾಭ್ಯಾಸಕ್ಕೆ ಅಂತ ತೆರಳಿದ್ದ ನೂರಾರು ವಿದ್ಯಾರ್ಥಿಗಳು ಭಾರತಕ್ಕೆ ಮರಳಿ ಬಾರಲಾಗದೇ ಸಿಲುಕಿಕೊಂಡಿದ್ದಾರೆ.
ಹತ್ತು ದಿನಗಳ ಹಿಂದೆ ಹೋದ ಉಡುಪಿಯ ಕಲ್ಯಾಣದ ವಿದ್ಯಾರ್ಥಿಯೊರ್ವ ಕೂಡ ಮರಳಿ ಬಾರಲಾಗದ ಸ್ಥಿತಿ ಎದುರಿಸುತ್ತಿದ್ದಾರೆ..ಕಲ್ಯಾಣಪುರದ ಮೆಲ್ವಿನ್ ಫೆರ್ನಾಂಡಿಸ್ ಅವರ ಮಗ ಗ್ಲೆನ್ ವೀಲ್ ಮೆಕ್ಲಿನ್ ಫೆರ್ನಾಂಡೀಸ್ ಹತ್ತು ದಿನಗಳ ಹಿಂದೆ ಎಂಬಿಬಿಎಸ್ ವ್ಯಾಸಂಗ ಮಾಡುವ ಉದ್ದೇಶದಿಂದ ಉಕ್ರೇನ್ ತೆರಳಿದ್ದು, ಸದ್ಯ ಮರಳಿ ಬಾರಲಾಗದೇ ಸಿಲುಕಿಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ, ತಂದೆ ಮೆಲ್ವಿನ್ ಫೆರ್ನಾಂಡಿಸ್, ಮೆಕ್ಲಿನ್ ಇರುವ ಸ್ಥಳದಿಂದ ದೂರದಲ್ಲಿ ಜೋರಾದ ಶಬ್ದ ಕೇಳಿಸುತ್ತಿದೆಯಂತೆ ಹೀಗಾಗಿ ಸದ್ಯಕ್ಕೆ ಮಗನನ್ನು ಸೇಫ್ ಬಂಕರ್ಗೆ ಸಿಫ್ಟ್ ಮಾಡಲಾಗಿದೆ, ಆದ್ರೆ ಬಂಕರ್ನಲ್ಲಿ ಅಲ್ಲಿ ಸರಿಯಾದ ಆಹಾರ ಸಿಗುತ್ತಿಲ್ಲ. ನಾವು ಪ್ರತಿ ಅರ್ಧ ಗಂಟೆಗೆ ಒಮ್ಮೆ ವಿಡಿಯೋ ಕಾಲ್ ಮಾಡಿ ನಾವು ಧೈರ್ಯ ತುಂಬುತ್ತಿದ್ದೇವೆ. ಆದರೂ ಯುದ್ದದ ಸ್ಥಿತಿಯನ್ನು ನೋಡಿದಾಗ ನಮಗೆ ಭಯವಾಗುತ್ತಿದೆ ಸರ್ಕಾರ ಆದಷ್ಟು ಬೇಗ ಎಲ್ಲ ವಿಧ್ಯಾರ್ಥಿಗಳನ್ನು ಕರೆ ತರಬೇಕು ಅಂತ ಆತಂಕ ತೋಡಿಕೊಂಡಿದ್ದಾರೆ...