UDUPI-ಹಿಜಾಬ್ ಹೋರಾಟಗಾರ್ತಿಯ ಅಣ್ಣನ ಮೇಲೆ ಹಲ್ಲೆ ಪ್ರಕರಣ; ಮೂವರ ಬಂಧನ
Tuesday, February 22, 2022
ಉಡುಪಿಯ ಹಿಜಾಬ್ ಹೋರಾಟಗಾರ್ತಿ ವಿದ್ಯಾರ್ಥಿನಿ ಶೀಫಾ ಸಹೋದರ ಸೈಫ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮಲ್ಪೆ ಪೋಲಿಸರು ಬಂಧಿಸಿದ್ದಾರೆ.
ಮಲ್ಪೆ ನಿವಾಸಿಗಳಾದ ದೀಪಕ್ ಕುಮಾರ್, ಮನೋಜ್, ಸನಿಲ್ ರಾಜ್ ಬಂಧಿತರು..
ನಿನ್ನೆ ತಡ ರಾತ್ರಿ ಉಡುಪಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ, ಹಿಜಾಬ್ ಹೋರಾಟಗಾರ್ತಿ ಶಿಫಾ ತಂದೆ ನಡೆಸುತಿದ್ದ ಹೋಟೆಲ್ ಮೇಲೆ ಕಲ್ಲು ತೂರಾಟ ನಡೆಸಿ, ಸಹೋದರನ ಸೈಫ್ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಗೆ ಸಂಘ ಪರಿವಾರ ಹಾಗೂ ರಘಪತಿ ಭಟ್ ಕಾರಣ ಅಂತ ಕ್ಯಾಂಪಸ್ ಪ್ರಂಟ್ ಇಂಡಿಯಾದ ಜಿಲ್ಲಾಧ್ಯಕ್ಷರು ಆರೋಪಿಸಿದ್ದರು. ಸದ್ಯ ತನಿಖೆ ಚುರುಕುಗೊಳಿಸೊದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.