UDUPI- ಹೊಡೆದಾಟ ಸ್ವರೂಪ ಪಡೆದುಕೊಂಡ ಹಿಜಾಬ್ ವಿವಾದ
Tuesday, February 22, 2022
ಉಡುಪಿ; ಹಿಜಾಬ್ ಹೋರಾಟಗಾರ್ತಿ, ಉಡುಪಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಹಸ್ರಾ ಶಿಫಾ ಅವರ ತಂದೆಯ ಹೋಟೆಲ್ ಮೇಲೆ ದಾಳಿ ಮಾಡಿ ಸಹೋದರನ ಸೈಪ್ ಮೇಲೆ ನಡೆಸಿದ್ದಾರೆ ಅಂತ ಉಡುಪಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಜಬ್ ಹೋರಾಟದಲ್ಲಿ ನನ್ನ ಅಣ್ಣ ನನ್ನ ಪರವಾಗಿ ನಿಂತಿದ್ದ. ಹೀಗಾಗಿ ನನ್ನ ತಂದೆ ನಡೆಸುತ್ತಿರುವ ಹೋಟೆಲ್ ಮೇಲೆ ದಾಳಿ ಮಾಡಿ. ಅಪಾರ ಆಸ್ತಿ ಮತ್ತು ಸ್ವತ್ತುಗಳನ್ನು ಧ್ವಂಸ ಮಾಡಲಾಗಿದೆ. ನಾನು ನನ್ನ ಧಾರ್ಮಿಕ ಹಕ್ಕನ್ನು ಕೇಳಬಾರದೆ? ಹಲ್ಲೆಕೋರರೇ ನಿಮ್ಮ ಮುಂದಿನ ಸಂತ್ರಸ್ತ ಯಾರು? ಅಂತ ಟ್ಚೀಟ್ ಮೂಲಕ ಹಸ್ರಾ ಶಿಫಾ ಪ್ರಶ್ನಿಸಿದ್ದಾರೆ.
ಅಲ್ಲದೇ ಸಂಘಪರಿವಾರದ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳಿ ಅಂತ ಶೀಫಾ ಉಡುಪಿ ಪೊಲೀಸರು ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ಇನ್ನೂ ಸದ್ಯ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೈಪ್ ಆರೋಗ್ಯ ವಿಚಾರಿಸಿ ಬಳಿಕ ಮಾತನಾಡಿದ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಅಕ್ರಂ ಅಸೀಲ್, ನೂರಕ್ಕಿಂತ ಹೆಚ್ಚು ಜನ ಏಕಕಾಲದಲ್ಲಿ ದೌರ್ಜನ್ಯವನ್ನು ಮಾಡಿದ್ದಾರೆ.
ವಿದ್ಯಾರ್ಥಿಗಳ ಮಾಹಿತಿಗಳನ್ನು ಸೋರಿಕೆ ಮಾಡಿದ್ದೇ ಮೊದಲ ತಪ್ಪು.ಮಾಹಿತಿ ಸೋರಿಕೆ ಆದಕೂಡಲೇ ಬೆದರಿಕೆ ಕರೆಗಳು ಬರಲಾರಂಭಿಸಿದವು. ವಿದ್ಯಾರ್ಥಿನಿಯರ ಮನೆತನಕ ಕೆಲವರು ಬೆನ್ನತ್ತಿ ಬರುತ್ತಿದ್ದಾರೆ. ಹೋಟೆಲಿಗೆ ಕಲ್ಲೆಸೆದು ಗಾಜುಗಳನ್ನು ಪುಡಿ ಮಾಡಲಾಗಿದೆ. ದಾಳಿಯ ಹಿಂದೆ ಶಾಸಕ ರಘುಪತಿ ಭಟ್ ಕೈವಾಡ ಇದೆ ಎಂಬ ಶಂಕೆ ಇದೆ ದಾಳಿಕೋರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ..