
ಮಲ್ಪೆಯ ವೈರಲ್ ವಾಸಣ್ಣ ಅಸ್ವಸ್ಥ- ಆಸ್ಪತ್ರೆಗೆ ದಾಖಲು
ಉಡುಪಿ;ತಮ್ಮ ವಿಶಿಷ್ಟ ಹಾವಭಾವ ಹಾಗೂ ಮಾತಿನ ಶೈಲಿಯಿಂದ ಜನಪ್ರಿಯತೆ ಗಳಿಸಿದ ವೈರಲ್ ವಾಸಣ್ಣ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಡುಪಿಯ ಆಶೀರ್ವಾದ ಚಿತ್ರಮಂದಿರದ ಬಳಿ ಅನಾರೋಗ್ಯದಿಂದ ಗಂಭೀರ ಸ್ಥಿತಿಯಲ್ಲಿದ್ದ ಬಿದ್ದಿದ್ದರು.
ಸ್ಥಳೀಯರ ಮಾಹಿತಿ ಮೇರೆಗೆ
ವಾಸಣ್ಣ ಅವರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆಟೋ ಚಾಲಕ ಆದಂ ಸಹಕರಿಸಿದ್ದಾರೆ.
ಸಂಬಂಧಿಕರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ