UDUPI; ಮಿಲಾಗ್ರಿಸ್ ಕಾಲೇಜಿನಲ್ಲೂ ಹಿಜಾಬ್‌ಗೆ ಬಿಗಿ ಪಟ್ಟು
Friday, February 18, 2022
ಉಡುಪಿಯ ಕಲ್ಯಾಣ ಪುರದ ಮಿಲಾಗ್ರಿಸ್ ಕಾಲೇಜಿನ್ಲೂ ಹಿಜಾಬ್ ವಿವಾದ ಬುಗಿಲೆದ್ದಿದೆ.
ಮಿಲಾಗ್ರಿಸ್ ಕಾಲೇಜಿನ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗೆ ಅವಕಾಶ ನೀಡಬೇಕು ಅಂತ ಪಟ್ಟು ಹಿಡಿದಿದ್ದು, ಹಿಜಾಬ್ ಧಾರಿ ವಿದ್ಯಾರ್ಥಿನಿಯರನ್ನು ಬೆಂಬಲಿಸಿದ ಮುಸ್ಲಿಂ ವಿದ್ಯಾರ್ಥಿಗಳು ಕ್ಲಾಸ್ ಬಹಿಷ್ಕಾರಿಸಿ ಹೊರಗಡೆ ಬಂದಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮುಸ್ಲಿಂ ವಿದ್ಯಾರ್ಥಿನಿಯರು, ನಾವು ಹಿಂದಿನಿಂದಲೂ ಹಿಜಾಬ್ ಧರಿಸಿಯೇ ತರಗತಿಯಲ್ಲಿ ಪಾಠ ಕೇಳುತ್ತಿದ್ದೆವು, ಆದ್ರೆ ಈಗ ಸರ್ಕಾರದ ಆದೇಶ ಅಂತ ನಮ್ಮನ್ನು ತರಗತಿಯ ಒಳಗಡೆ ಹಿಜಾಬ್ ಧರಿಸಿ ಪಾಠ ಕೇಳುದಕ್ಕೆ ಬಿಡುತ್ತಿಲ್ಲ, ಸದ್ಯ ಕಾಲೇಜಿನಲ್ಲಿ ಇಂಟರ್ನಲ್ ಪರೀಕ್ಷೆ ನಡೆಯುತ್ತಿದ್ದು, ನಮಗೆ ಇದರಿಂದ ತೊಂದರೆ ಆಗುತ್ತಿದೆ. ನಮಗೆ ಶಿಕ್ಷಣದಷ್ಟೇ ಧರ್ಮವೂ ಮುಖ್ಯ ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯುದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ.