ಪ್ರಮೋದ್ ಮಧ್ವರಾಜ್‌ಗೆ Bjp ಗೇಟ್ ಓಪನ್ ಇದೆ- ರಘುಪತಿ ಭಟ್!
Friday, February 18, 2022
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬರ್ತಾರೆ ಎನ್ನುವ ಬಿಸಿ ಬಿಸಿ ಚರ್ಚೆ ನಡುವೆನೇ, ಶಾಸಕ ರಘಪತಿ ಭಟ್ ಪ್ರಮೋದ್ ಮಧ್ವರಾಜ್‌ಗೆ ಬಿಜೆಪಿ ಗೇಟ್ ಓಪನ್ ಇದೆ ಎನ್ನುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಉಡುಪಿಯ ಪತ್ರಿಕಾ ಭವನದಲ್ಲಿ, ಪ್ರಮೋದ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕ ರಘಪತಿ ಭಟ್, ಪ್ರಮೋದ್ ಬಿಜೆಪಿಗೆ ಬರೋದಾದ್ರೆ ಸ್ವಾಗತ ಇದೆ. ಅವರಿಂದ ಪಕ್ಷ ಮತ್ತಷ್ಟು ಗಟ್ಟಿಯಾಗುತ್ತದೆ. ಬಿಜೆಪಿ ಪಕ್ಷದ ಗೇಟ್ ಅವರಿಗೆ ಈಗ ಓಪನ್ ಇದೆ ಅಂತ ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ನನಗೆ ಪಕ್ಷ ಸೇರ್ಪಡೆ ಕುರಿತು ಯಾವುದೇ ಮಾಹಿತಿ ಇಲ್ಲ. ಪಕ್ಷಕ್ಕೆ ನಮ್ಮಲ್ಲಿ ಕೇಳಿ ತಗೋಳ್ಳುವುದಿಲ್ಲ ಹಿಂದೆ, ಚುನಾವಣಾ ಸಂದರ್ಭದಲ್ಲಿ ವಿರೋಧ ಮಾಡಿದ್ದೇನೆ ಕಾರಣ ಆಗ ನಾನು ಟಿಕೇಟ್ ಆಕಾಂಕ್ಷಿಯಾಗಿದ್ದೆ, ಆದ್ದರಿಂದ ಸ್ವಾಭಾವಿಕವಾಗಿ ವಿರೋಧ ಮಾಡಿದ್ದೆ. ಈಗ ಅವರು ಬಂದ್ರೆ ಸ್ವಾಗತವಿದೆ. ಯಾಕಂದ್ರೆ ಈಗ ನಮ್ಮ ಬುಡ ಗಟ್ಟಿ ಇದ್ದು ನಮಗೆ ಯಾವುದೇ ಸಮಸ್ಯೆ ಇಲ್ಲ. ಅವರು ಬಿಜೆಪಿಗೆ ಬಂದರೆ ಪಕ್ಷ ಗಟ್ಟಿಯಾಗುತ್ತದೆ ಅಂತ ಹೇಳುವ ಮೂಲಕ ಪ್ರಮೋದ್ ಬರೋ ಸಾಧ್ಯತೆಯನ್ನು ಹೆಚ್ಚಾಗಿಸಿದ್ದಾರೆ..