-->

ಹಿಜಾಬ್ ವಿವಾದ: ಭಾರತದ ಬಿಜೆಪಿ ಸದಸ್ಯರ ಕುರಿತಂತೆ ಕುವೈಟ್ ಸಂಸತ್‌ಗೆ ಅಲ್ಲಿನ ಸಂಸದರು ಬರೆದ ಪತ್ರದಲ್ಲೇನಿದೆ ಗೊತ್ತಾ?

ಹಿಜಾಬ್ ವಿವಾದ: ಭಾರತದ ಬಿಜೆಪಿ ಸದಸ್ಯರ ಕುರಿತಂತೆ ಕುವೈಟ್ ಸಂಸತ್‌ಗೆ ಅಲ್ಲಿನ ಸಂಸದರು ಬರೆದ ಪತ್ರದಲ್ಲೇನಿದೆ ಗೊತ್ತಾ?

ಕುವೈತ್: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಭಾರತದ ಬಿಜೆಪಿ ಸದಸ್ಯರಿಗೆ ಕುವೈಟ್ ಗೆ ಪ್ರವೇಶ ನಿಷೇಧಿಸಬೇಕೆಂದು ಕುವೈತ್ ಸಂಸದ ಡಾ.ಸಲೇಹ್ ಟಿಎಚ್ ಅಲ್-ಮುತೈರಿ ಕುವೈತ್ ಸಂಸತ್ತಿಗೆ ಪತ್ರ  ಬರೆದಿದ್ದಾರೆ.
ಅಲ್ ಮಹಾಮೀ ಮಜ್‌ಬಲ್ ಅಶ್ಶರೀಖ ಎಂಬ ಟ್ವಟರ್ ಅಕೌಂಟ್ ನಲ್ಲಿ ಸಂಸದ ಡಾ. ಸಾಲೇಹ್ TH ಅಲ್ ಮುತೈರಿ ಅವರದ್ದು ಎನ್ನಲಾದ ಪತ್ರವನ್ನು ಹಂಚಿಕೊಂಡಿದೆ.

ಈ ಪತ್ರದಲ್ಲಿ ಸಂಸದ ಸಾಲೇಹ್ ಭಾರತದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದವರಾದ ಬಿಜೆಪಿಗರನ್ನು ಕುವೈಟ್‌ಗೆ ತಡೆ ಹಿಡಿಯಬೇಕೆಂದು ತಿಳಿಸಿದ್ದಾರೆ. ಇದಕ್ಕೆ ಇತರ ಹಲವು ಸಂಸದರು ಸಹಮತ ವ್ಯಕ್ತಪಡಿಸಿದ್ದಾರೆ.

'ಭಾರತದ ಆಡಳಿತಾ ರೂಢ ಬಿಜೆಪಿಗರಿಗೆ ಶೀಘ್ರದಲ್ಲೇ ಕುವೈಟ್ ಪ್ರವೇಶ ನಿಷೇಧಿಸುವಂತೆ ಪ್ರಭಾವಿ ಸಂಸದರ ಗುಂಪೊಂದು ಕುವೈಟ್ ಸರಕಾರವನ್ನು ಆಗ್ರಹಿಸಿದೆ. ಸಾರ್ವಜನಿಕವಾಗಿ ಮುಸ್ಲಿಂ ಬಾಲಕಿಯರ ಮೇಲಾಗುತ್ತಿರುವ ಕಿರುಕುಗಳನ್ನು ನೋಡಿ ಸುಮ್ಮನಿರಲು ನಮ್ಮಿಂದ ಸಾಧ್ಯವಿಲ್ಲ. ಇದು ಮುಸ್ಲಿಂ ಸಮುದಾಯ ಒಗ್ಗೂಡುವ ಸಮಯವಾಗಿದೆ"  ಎಂದು  ಟ್ವಿಟರ್‌ನಲ್ಲಿ ಬರೆಯಲಾಗಿದೆ.

ಈ ಟ್ವೀಟನ್ನು ರಿಟ್ವೀಟ್‌ ಮಾಡಿರುವ ಸಂಸದ ಶಶಿ ತರೂರ್‌, ದೇಶೀಯ ಬೆಳವಣಿಗೆಗಳಿಂದ  ಅಂತರಾಷ್ಟ್ರೀಯ ಪರಿಣಾಮಗಳಾಗುತ್ತವೆ. ಭಾರತದಲ್ಲಿ ಇಸ್ಲಾಮೋಫೋಬಿಯಾ ಹೆಚ್ಚುತ್ತಿರುವ ಬಗ್ಗೆ ಹಾಗೂ ಅದರ ವಿರುದ್ಧ ಪ್ರಧಾನಿ ಮೋದಿ ನಿರ್ಣಾಯಕ ಕ್ರಮಗಳನ್ನು ತೆಗೆಯದ ಕುರಿತು ಗಲ್ಫ್‌ ರಾಷ್ಟ್ರಗಳ ಗೆಳೆಯರಿಂದ ನಾನು ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99